ನಡ: ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಕಾರಿ ಪ್ರೌಢಶಾಲೆ ನಡದಲ್ಲಿ ಜೂ.21 ರಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಯಾಕೂಬ್.ಎಸ್ ಕೊಯ್ಯೂರು ಇವರು ನೆರವೇರಿಸಿ, ಯೋಗ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಜರಿದ್ದರು.ಶಿಕ್ಷಕ ಶಿವಪುತ್ರ ಸುಣಗಾರ ಧನ್ಯವಾದವಿತ್ತರು.ದೈಹಿಕ ಶಿಕ್ಷಕಿ ಸುಜಯ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾವಹಿಸಿದರು.