Site icon Suddi Belthangady

ಉಜಿರೆ: ಶ್ರೀ.ಧ.ಮಂ.ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನದ ಒಂದೊಂದು ಥೀಮ್ ನೊಂದಿಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.ಈ ವರುಷ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಜಿಕ್ ಸೈನ್ಸ್ ಇಲ್ಲಿನ ಪ್ರಾಧ್ಯಾಪಕರಾದ ಡಾ.ಆತ್ಮಿಕ ಇವರು ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು 2023ರ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ ‘ವಸುದೈವ ಕುಟುಂಬಕಂ’ ಕುರಿತು ಮಾಹಿತಿ ನೀಡಿದರು. ಪ್ರತಿ ದಿನ ಕನಿಷ್ಠ ಐದು ನಿಮಿಷ ಯೋಗ ಮಾಡೋದು ಯಾಕೆ ಮುಖ್ಯ ದಿನದಲ್ಲಿ ಅರ್ಧಗಂಟೆ ಯೋಗ ಮಾಡಿದ್ರೆ ಸಾಕಷ್ಟು ಲಾಭ ಸಿಗುತ್ತದೆ. ಅದು ಸಾಧ್ಯವಿಲ್ಲ ಎನ್ನುವವರು ದಿನದಲ್ಲಿ ಐದರಿಂದ 10 ನಿಮಿಷವಾದ್ರೂ ಯೋಗ ಮಾಡಿ, ಅದರ ಲಾಭ ಪಡೆಯಬೇಕು. ನೀವು ಬೆಳಿಗ್ಗೆ, ಸಂಜೆ ಅಥವಾ ಶಾಲೆಯ ಬಿಡುವಿನ ಸಮಯದಲ್ಲಿ ಯೋಗ ಮಾಡಬಹುದು.ಕುಳಿತಲ್ಲಿಯೇ ಐದು ನಿಮಿಷ ಯೋಗ ಮಾಡಿದರೂ, ಅದರಿಂದ ಉತ್ತಮ ಆರೋಗ್ಯವನ್ನು ನೀವು ಪಡೆಯಬಹುದು. ಯೋಗವು ಶಕ್ತಿ, ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.ಬೆನ್ನು ನೋವು ನಿವಾರಣೆಗೆ ಸಂಧಿವಾತ, ಹೃದಯದ ಆರೋಗ್ಯಕ್ಕೆ, ಉತ್ತಮ ನಿದ್ರೆಗೆ, ಒತ್ತಡ ನಿಭಾಯಿಸಲು ಯೋಗ ಉತ್ತಮ ಎಂದು ತಿಳಿಸಿದರು ನಂತರ ವಿದ್ಯಾರ್ಥಿನಿಯರು ನಿತ್ಯವೂ ಮಾಡಬಹುದಾದ ಯೋಗವನ್ನು ತಾವು ಮಾಡಿ ವಿದ್ಯಾರ್ಥಿನಿಯರಿಂದ ಮಾಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಹಾಗೂ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಹಾಗೂ ನಿಶ್ಮಿತಾ ಉಪಸ್ಥಿತರಿದ್ದರು ಕು. ಸಮೀಕ್ಷಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ 37 ವಿದ್ಯಾರ್ಥಿನಿಯರು ಭಾಗವಹಿಸಿದ್ದರು

Exit mobile version