Site icon Suddi Belthangady

ಪುದುವೆಟ್ಟು ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ಇಂಗ್ಲೀಷ್ ತರಬೇತಿ ಕಾರ್ಯಗಾರ

ಪುದುವೆಟ್ಟು: ಜೂ.20ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಕಾಂಚನ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹರ್ಷಕುಮಾರ್ ಕೆಎಂ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇಂಗ್ಲಿಷ್ ಕಾರ್ಯಗಾರವನ್ನು ಏರ್ಪಡಿಸಲಾಯಿತು.ಈ ಕಾರ್ಯಗಾರದಲ್ಲಿ ಶ್ರೀಯುತರ ಧರ್ಮಪತ್ನಿಯಾದ ಕನ್ಯಾಡಿ ಶಾಲೆಯ ನಿವೃತ್ತ ಶಿಕ್ಷಕಿ ವಾರಿಜರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡರವರು ಪ್ರಸ್ತುತ ಕಲಿಕೆಯಲ್ಲಿ ಆಂಗ್ಲ ಭಾಷೆಯು ಬಹಳಷ್ಟು ಪ್ರಾಮುಖ್ಯತೆಯನ್ನು ವಹಿಸಿಕೊಳ್ಳುತ್ತವೆ.ಎಲ್ಲಾ ಕ್ಷೇತ್ರದಲ್ಲಿಯೂ ಆಂಗ್ಲ ಭಾಷೆಯು ಪ್ರಮುಖ ಪಾತ್ರ ವಹಿಸುವುದರಿಂದ ಇಂಗ್ಲೀಷ್ ಕಾರ್ಯಗಾರವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹರ್ಷಕುಮಾರ್.ಕೆ ಎಮ್ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಂಗ್ಲ ಭಾಷೆಯ ಬರವಣಿಗೆ ಶೈಲಿಯನ್ನು, ಇಂಗ್ಲಿಷ್ ರೈಮ್ಸ್ ಗಳನ್ನು ಬೇರೆ ಬೇರೆ ಚಟುವಟಿಕೆಗಳನ್ನು ತಿಳಿಸಿಕೊಟ್ಟರು.

ಈ ಒಂದು ಕಾರ್ಯಗಾರದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

Exit mobile version