ಉಜಿರೆ: ಶ್ರೀ.ಧ.ಮ.ಅ.ಸೆಕೆಂಡರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಜಿರೆ ಶ್ರೀ ಧ.ಮಂ.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಸಾತ್ವಿಕ್ ಜೈನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, “ಯೋಗಾಭ್ಯಾಸದಿಂದ ನಮ್ಮ ಮಾನಸಿಕ ದೈಹಿಕ ಆರೋಗ್ಯ ಸದೃಢಗೊಳ್ಳುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ.ಧ.ಮಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ವೈ.ಯಂ ರವರು “ಯೋಗಾಭ್ಯಾಸವು ನಮ್ಮ ಅಂಗಾಂಗಗಳು ಹಾಗೂ ನರನಾಡಿಗಳನ್ನು ಚುರುಕುಗೊಳಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ” ಎನ್ನುವ ಕಿವಿ ಮಾತಿನೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯೋಗ ತರಬೇತುದಾರರಾಗಿ ಶ್ರೀ.ಧ.ಮಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕುಮಾರಿ ಸೃಷ್ಟಿ ರಾವ್, ಧೃತಿ ಲಕ್ಷ್ಮಿ, ಹಾಗೂ ಉಷಾ ವಿ.ಗೌಡ ಉಪಸ್ಥಿತರಿದ್ದು ಯೋಗಾಭ್ಯಾಸ ನೆರವೇರಿಸಿ ಕೊಟ್ಟರು. ಶಾಲಾ ಮುಖ್ಯೋಪಾಧ್ಯಯ ಸುರೇಶ್.ಕೆ ರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.
ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಯೋಗದಿನಾಚರಣೆಯಲ್ಲಿ ಪಾಲ್ಗೊಂಡರು. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಯೋಗ ಸಂಯೋಜಕ ಪರಮೇಶ್ವರ್.ಬಿ ವಂದಿಸಿದರು.ಶಿಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.