Site icon Suddi Belthangady

ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ ಹಾಗೂ ಮಂತ್ರಿ ಮಂಡಲ ರಚನೆ

ಉರುವಾಲು: ಇಲ್ಲಿನ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜೂ.19 ರಂದು 2023-24 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು.

ಶಾಲಾ ನಾಯಕಿಯಾಗಿ ಅನುಜ್ಞಾ ಸಾಲಿಯಾನ್ 10 ನೇ ತರಗತಿ, ಉಪ ನಾಯಕನಾಗಿ ಸೃಜನ್ ಪ್ರಸಾದ್ 10 ನೇ ತರಗತಿ ಇವರುಗಳು ಆಯ್ಕೆಗೊಂಡರು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಹಾಗೂ ನಾಯಕತ್ವದ ಅರಿವು ಮೂಡಿಸುವ ಉದ್ದೇಶದಿಂದ ಮತ ಹಾಕುವ ಮೂಲಕ ತಮ್ಮ ನಾಯಕರನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿತ್ತು.ಇದರೊಂದಿಗೆ ಶಾಲಾ ಮಂತ್ರಿ ಮಂಡಲದ ಇತರೆ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿ, ಪ್ರಮಾಣ ವಚನ ಸ್ವೀಕಾರದೊಂದಿಗೆ ಮೊದಲ ಸಭೆ ನಡೆಸಲಾಯಿತು.


ಸಭಾಪತಿಯಾಗಿ ಕನಿಷ್ಕ 7 ನೇ ತರಗತಿ , ಗೃಹ ಮಂತ್ರಿಯಾಗಿ ಅದ್ವೈತ 9 ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಕ್ರಿಪಾಶ್ರೀ, ಶರಣ್ಯ 10 ನೇ ತರಗತಿ, ಸ್ವಚ್ಚತಾ ಮಂತ್ರಿಯಾಗಿ ಮೋಕ್ಷಿತ್ 10 ನೇ ತರಗತಿ, ಶಿಸ್ತು ಮಂತ್ರಿಯಾಗಿ ಶರ್ವರಿ 10 ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಹುನೈದ 9 ನೇ ತರಗತಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶೋಭಿತಾ ಕೆ.ಆರ್ ಇವರು ಚುನಾವಣಾ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.

ಶಾಲೆಯ ಇತರ ಶಿಕ್ಷಕರು ಸಹಕರಿಸಿದರು.

Exit mobile version