ಬೆಳ್ತಂಗಡಿ: ಬದ್ರೀಯಾ ಜುಮ್ಮಾ ಮಸ್ಜಿದ್ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷ ಶೇಕಬ್ಬ ಹಾಜಿ ದರ್ಖಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಗಿ ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ ಅವಿರೋಧವಾಗಿ ಪುನರಾಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಹಾಜಿ ಶೇಕಬ್ಬ ದರ್ಖಾಸ್, ಪ್ರಧಾನ ಕಾರ್ಯದರ್ಶಿಯಾಗಿ ಸಾಧಿಕ್ ಎಂ, ಕೋಶಾಧಿಕಾರಿಯಾಗಿ ಅಶ್ರಫ್ ಗುಂಡೇರಿ, ಉಪಾಧ್ಯಕ್ಷರಾಗಿ ಬಶೀರ್ ವೇಣೂರು ಮತ್ತು ಇಬ್ರಾಹಿಂ ( ತಮುನಾಕ) , ಕಾರ್ಯದರ್ಶಿಯಾಗಿ ಪಿ.ಕೆ.ಶರೀಫ್ ಮತ್ತು ಅಶ್ರಫ್ ಬಾವಿಬಳಿ, ಲೆಕ್ಕಪರಿಶೋಧಕರಾಗಿ ಸಿದ್ದೀಕ್ ಮಸೀದಿಬಳಿ, ವ್ಯವಸ್ಥಾಪಕರಾಗಿ ರಫೀಕ್ ಜಿ.ಎ, ಗೌರವ ಸಲಹೆಗಾರರಾಗಿ ಶಂಶುದ್ದೀನ್ ಕಟ್ಟೆ ಮತ್ತು ಕಮರುದ್ದೀನ್ ಮಸೀದಿಬಳಿ, ಕಾನೂನು ಸಲಹೆಗಾರರಾಗಿ ಶಮೀಮ್ ಯು ಯೂಸುಫ್ ಇವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಕರೀಂ ಕಾರಂದೂರು, ಆದಂ ಮಂಜೊಟ್ಟಿ, ದಾವೂದ್ ಸಾಹೇಬ್ , ಸುಲೈಮಾನ್ ಅಬ್ಬು, ನಝೀರ್ ಕಾಂತಿಜಾಲ್, ಹಮೀದ್ ಬಾವಿಬಳಿ, ಅಬೂಬಕ್ಕರ್ ಮಂಜೊಟ್ಟಿ, ಮುಸ್ತಫಾ ಮಂಜೊಟ್ಟಿ, ನಿಝಾಮ್ ಗಿಂಡಾಡಿ, ಶಮೀರ್ ಮಸೀದಿಬಳಿ, ಹಸನ್ ಗಿಂಡಾಡಿ, ಬಶೀರ್ ಮಸೀದಿಬಳಿ, ಹಸೈ ಮಸೀದಿಬಳಿ, ಇಬ್ರಾಹಿಂ ಮಂಜೋಟ್ಟಿ, ಅಕ್ಬರ್ ಮಟ್ಲ, ಉಸ್ಮಾನ್ ಕಾಂತಿಜಾಲ್ ,ಇಬ್ರಾಹಿಮ್ ಹೊಳೆಬದಿ ಹಾಗೂ ಮುಬಾರಕ್ ಮಂಜೊಟ್ಟಿ ಇವರು ಆಯ್ಕೆಯಾಗಿದ್ದಾರೆ.