Site icon Suddi Belthangady

ನ್ಯಾಯವಾದಿ ಶಿವಕುಮಾರ್ ರವರ ಕಚೇರಿ ಸ್ಥಳಾಂತರ

ಬೆಳ್ತಂಗಡಿ: ತನ್ನ ಕಕ್ಷಿದಾರರಿಗೆ ಸಂವಿಧಾನ ಬದ್ಧ ನ್ಯಾಯ ಒದಗಿಸುವ ಮೂಲಕ ವಕೀಲ ವೃತ್ತಿಗೆ ಘನತೆ, ಗೌರವ ತಂದುಕೊಡುವ ಕೆಲಸ ವಕೀಲರಿಂದ ನಡೆಯಬೇಕು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿ ಮುಖ್ಯರಸ್ತೆಯ ವಿವಾ ಕಾಂಪ್ಲೆಕ್ಸ್ ನಲ್ಲಿ ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್.ಎಂ ರವರ ಸ್ಥಳಾಂತರಗೊಂಡ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಷನಲ್ ಇನ್ಶುರೆನ್ಸ್ ಕಂಪನಿಯ ಅಭಿವೃದ್ಧಿ ಅಧಿಕಾರಿ ಹರಿದಾಸ್ ಎಸ್.ಎಂ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ಕಾರ್ಯದರ್ಶಿ ಶೈಲೇಶ್ ಠೋಸರ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ.ಕೆ ಧನಂಜಯ ರಾವ್, ಹರಿಶ್ಚಂದ್ರ ಬಳ್ಳಾಲ್, ಸಂತೋಷ್ ಕುಮಾರ್, ಅಲೋಷಿಯಸ್ ಲೋಬೋ, ಮನೋಹರ ಇಳಂತಿಲ, ನವೀನ್ ಬಿ.ಕೆ, ವಸಂತ ಮರಕಡ, ಕೇಶವ ಬೆಳಾಲು, ಶ್ಯಾಮ್ ಭಟ್, ಮನೋಹರ ನಿಡ್ಲೆ, ಹಿರಿಯ ಕಾರ್ಮಿಕ ಮುಖಂಡ ವಸಂತ ನಡ, ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ, ಲಕ್ಷ್ಮೀ ಮಚ್ಚಿನ ಪ್ರಶಾಂತ ಬಳಂಜ, ಉಪನ್ಯಾಸಕ ಸುಜೀತ್ ಉಜಿರೆ, ಸಾಮಾಜಿಕ ಹೋರಾಟಗಾರ ಶೇಖರ್ ಎಲ್ ಉಪಸ್ಥಿತರಿದ್ದರು.
ನ್ಯಾಯವಾದಿ ಸುಕನ್ಯಾ ಹರಿದಾಸ್ , ಹರಿಪ್ರಕಾಶ್ ಪಿ.ಎನ್ , ಶಿವಕುಮಾರ್ ಎಸ್. ಎಂ ರವರ ಪತ್ನಿ , ಎಸ್.ಡಿ.ಎಂ ಇಂಗ್ಲಿಷ್ ಮೀಡಿಯಂ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪರಿಮಳ ಶಿವಕುಮಾರ್ , ಪುತ್ರ ಸುದೀಪ್ ಸ್ವಾಗತಿಸಿ, ಸತ್ಕಾರಿಸಿದರು.

Exit mobile version