ಕಣಿಯೂರು : ಇಲ್ಲಿಯ ಮಾವಿನ ಕಟ್ಟೆ ಸಮೀಪದ ಯಂತ್ರಡ್ಕ ಎಂಬಲ್ಲಿ ಬೆಳಿಗ್ಗೆ ಕಾರುಗಳ ಮುಖಾಮುಖಿ ಡಿಕ್ಕಿಯಾದ ಘಟನೆ ಜೂ.20 ರಂದು ನಡೆದಿದೆ.
ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ಮಾರುತಿ ರಿಡ್ಜ್ ಕಾರು ಹಾಗೂ ಗುರುವಾಯನಕೆರೆಯಿಂದ ಉಪ್ಪಿನಂಗಡಿ ಮಾರುತಿ ಓಮ್ನಿ ಬೀಡಿ ಸಾಗಾಟ ಮಾಡುವ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಓಮ್ನಿ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.
ಸ್ಥಳೀಯರು ತಕ್ಷಣ ಆಸ್ಪತ್ರೆ ದಾಖಲಿಸಿದರು.
ಸ್ಥಳೀಯರು 112 ಗೆ ಕರೆ ಮಾಡಿದ ಕೆಲವೇ ಸಮಯದಲ್ಲಿ ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಎ.ಎಸ್.ಐ ಮತ್ತು ವಾಹನ ಚಾಲಕ ನಾಗರಾಜ್ ಭೇಟಿ ನೀಡಿ ವಾಹನಗಳ ತೆರವು ಮಾಡಿ ವಾಹನ ಸಂಚಾರ ಅನುವುಮಾಡಿ ಡಿಕ್ಕಿಯಾದ ವಾಹನಗಳ ಮೇಲೆ ಕೇಸು ದಾಖಲಿಸಿದರು.