Site icon Suddi Belthangady

ಧರ್ಮಸ್ಥಳ ಶ್ರೀ.ಮಂ.ಸ್ವಾ.ಅ.ಹಿ.ಪ್ರಾ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ ಶಾಲೆ, ಯೋಗ ತರಬೇತಿ ಶಿಬಿರ ಜೂ.14ರಂದು ನಡೆಯಿತು.

ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಚುರೋಪತಿ ಯೋಗ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದಿಶಾ ಪೂಜಾರಿ ಇವರು ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯರಾವ್ ಯೋಗ ಮೂಲತ: ಅತ್ಯಂತ ಪ್ರಾಚೀನ ಆರೋಗ್ಯಕರ ಅಬ್ಯಾಸ, ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ.ಯೋಗ ಮಾನವ ದೇಹದ ದೈಹಿಕ ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ ಎಂದರು.

ಯೋಗ ಶಿಕ್ಷಕರು ಹಾಗು ದೈಹಿಕ ಶಿಕ್ಷಕರಾದ ಸಂಜೀವ.ಕೆ ಈ ಕಾರ್ಯಕ್ರಮ ಆಯೋಜಿಸಿದರು.

ಶಿಬಿರದಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾವ್ಯಾ ಧನ್ಯವಾದವಿತ್ತರು.ಹಾಗು ಪೂರ್ಣಿಮಾ ಜೋಷಿ ನಿರೂಪಿಸಿದರು.

Exit mobile version