Site icon Suddi Belthangady

ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ರಾಜ ಕೇಸರಿ ಸಂಘಟನೆಯಿಂದ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿರುವ ನಗರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಸೇತುವೆಯ ಮೇಲ್ಬಾಗದಲ್ಲಿ ಮಣ್ಣು ಮತ್ತು ಮರಳು ಸೇರಿ ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿದುಹೋಗುವಂತಹ ರಂದ್ರಗಳು ಮುಚ್ಚಿ ಹೋಗಿದ್ದು ಮಳೆಯ ಸಂದರ್ಭದಲ್ಲಿ ಸೇತುವೆ ಮೇಲ್ಭಾಗದಲ್ಲಿ ಮಳೆ ನೀರು ನಿಂತು ಪಾದಾಚಾರಿಗಳಿಗೆ ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಸೇತುವೆ ಮೇಲೆ ನಡೆದುಕೊಂಡು ಹೋಗಲು ಬಹಳ ಕಷ್ಟಕರವಾಗದನ್ನು ಅರಿತ ರಾಜ ಕೇಸರಿ ಸಂಘಟನೆ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್ ಇವರ ಸೂಚನೆಯೊಂದಿಗೆ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 539 ನೆಯ ಸೇವಾ ಯೋಜನೆಯ ಶ್ರಮದಾನದ ಮೂಲಕ ಸಂಗ್ರಹವಾದ ಮಣ್ಣು ಹಾಗೂ ಮರಳುನ್ನು ತೆರವುಗೊಳಿಸಿ ಸೇತುವೆಯನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸೇತುವೆಯಲ್ಲಿ ಸಂಚರಿಸಿದ ಪಾದಾಚಾರಿಗಳು ಹಾಗೂ ವಾಹನ ಸವಾರರು ಸಂಘಟನೆ ಈ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ, ನಿಮ್ಮ ಈ ಸಮಾಜ ಸೇವೆಯ ಕಾರ್ಯಗಳು ಇನ್ನಷ್ಟು ನಿರಂತರವಾಗಿ ಮುನ್ನಡೆಯಲ್ಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ರಾಘವೇಂದ್ರ ನಗರ, ರಾಜ ಕೇಸರಿ ಸಂಘಟನೆ ಅಧ್ಯಕ್ಷರಾದ ಸಂದೀಪ್, ರಾಜ ಕೇಸರಿ ಸಂಘಟನೆ ಸದಸ್ಯರಾದ ಶಶಿಕಾಂತ್, ರಾಮಣ್ಣ, ಗಣೇಶ್, ಕಿರಣ್, ಗಣೇಶ್, ಅಭಿಷೇಕ್, ಹರೀಶ್, ಕಿಶನ್, ಭರತ್, ಗಣೇಶ್ (ರಿಕ್ಷಾ) ಇವರೆಲ್ಲ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version