Site icon Suddi Belthangady

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಯಿಂದ ಪುಸ್ತಕ ವಿತರಣೆ- ವಿದ್ಯೆಯಿಂದ ಮಾತ್ರ ಸ್ವತಂತ್ರವಾಗಿ ಬದುಕಲು ಸಾಧ್ಯ: ಪ್ರವೀಣ್ ಕುಮಾರ್ ಹೆಚ್.ಎಸ್

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ ಸಂಘದ ಧತ್ತಿನಿಧಿಯಿಂದ ಪುಸ್ತಕ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವು ಬಳಂಜ ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ಜೂನ್ 18 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಧತ್ತಿನಿಧಿಯಿಂದ ನೀಡಲಾಯಿತು.

ಸಮಾಜದ ಕೆಲವು ಬಂಧುಗಳು ಅಗಲಿದ ಅವರ ನೆನಪಿಗಾಗಿ ಅವರ ಮನೆಯವರು ವಿದ್ಯೆಗೆ ಸಹಕಾರ ನೀಡುವ ದೃಷ್ಟಿಯಲ್ಲಿ ಸಂಘದ ಧತ್ತಿನಿಧಿಗೆ ಪ್ರೋತ್ಸಾಹ ನೀಡಿದ್ದು ಆ ನಿಧಿಯಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪುಸ್ತಕ ವಿತರಣೆ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ವಹಿಸಿ ಮಾತನಾಡಿ ವಿದ್ಯೆಯಿಂದ ಮಾತ್ರ ನಾವು ಸ್ವತಂತ್ರವಾಗಿ ಬದುಕಲು ಸಾಧ್ಯವಿದೆ. ಯಾರು ಕಸಿದುಕೊಳ್ಳಲಾಗದ ದೊಡ್ಡ ಸಂಪತ್ತು ಶಿಕ್ಷಣ ಮಾತ್ರ. ಇವತ್ತು ಶಿಕ್ಷಣದಿಂದ ಯಾರು ವಂಚಿತರಾಗಬಾರದೆಂಬ ಉದ್ದೇಶದಿಂದ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ಪುಸ್ತಕ ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಉದ್ಯೋಗ ಪಡೆದು ಸಮಾಜಕ್ಕೆ ಆಸ್ತಿಯಾಗಬೇಕೆಂದರು.

ಕಾರ್ಯಕ್ರಮದಲ್ಲಿ ವೈ.ನೋಣಯ್ಯ ಪೂಜಾರಿ, ಬಾಲಕೃಷ್ಣ ಪೂಜಾರಿ ಯೈಕುರಿ, ರವೀಂದ್ರ ಪೂಜಾರಿ ಮಜಲು, ಯತೀಶ್ ವೈ.ಎಲ್ ಬಳಂಜ, ದೇಜಪ್ಪ ಪೂಜಾರಿ ಸುಧಾಮ, ಸುರೇಶ್ ಪೂಜಾರಿ ಜೈಮಾತ, ದಿನೇಶ್ ಕೋಟ್ಯಾನ್ ಕುದ್ರೊಟ್ಟು, ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು, ಪ್ರವೀಣ್ ಪೂಜಾರಿ ಲಾಂತ್ಯರು, ವಿಜಯ ಪೂಜಾರಿ ಯೈಕುರಿ, ಸದಾನಂದ ಪೂಜಾರಿ ಬೊಂಟ್ರೊಟ್ಟು,ರಂಜಿತ್ ಪೂಜಾರಿ ಮಜಲಡ್ಡ, ನಾರಾಯಣ ಪೂಜಾರಿ ಹೇವ, ಕೊರಗಪ್ಪ ಪೂಜಾರಿ ಸುದೆರ್ದು, ವಿಶ್ವನಾಥ ಪೂಜಾರಿ ಕೆಂಪುಂರ್ಜ, ರಾಧಾಕೃಷ್ಣ ಅಲ್ಲಿಂತ್ಯಾರು, ಭುವನೇಂದ್ರ ಎಲ್ಯೋಟ್ಟು, ಜಗದೀಶ್ ಪೂಜಾರಿ ಬಳ್ಳಿದಡ್ಡ, ಶರತ್ ಅಂಚನ್ ಬಾಕ್ಯರಡ್ಡ, ವಿಶಾಲ ಜಗದೀಶ್, ಪುಷ್ಪಾ ಗೀರೀಶ್, ಕಲಾವತಿ, ರತ್ನಾಕರ ಮಜ್ಜೆನಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುವ ಸಾಹಿತಿ, ಸಂಘದ ಸದಸ್ಯ ಚಂದ್ರಹಾಸ ಬಳಂಜ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ ವಂದಿಸಿದರು.

Exit mobile version