ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸುತ್ತಿನ ಡಿಜಿಟಲ್ ಗ್ರಾಮ ಸಭೆ ಕಳಿಯ ಕೃಷಿ ಪತ್ತಿನ ಸಹಕಾರಿ ಸಭಾಭವನದಲ್ಲಿ ಜೂ.19 ರಂದು ಜರುಗಿತು.
ಕಳಿಯ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಕಳಿಯ ಗ್ರಾಮ ಪಂಚಾಯತು 2022-23 ರ ವಿವಿಧ ಯೋಜನೆಗಳಡಿ ಜಮಾ, ಖರ್ಚು ವಿವರ ಸಭೆ ವಾಚಿಸಿದರು.
2023 -24 ರಲ್ಲಿ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ವಾರ್ಡ್ ಗಳಲ್ಲಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಬಗ್ಗೆ ವರದಿಯನ್ನು ಕಳಿಯ ಗ್ರಾಮ ಪಂಚಾಯತು ಕಾರ್ಯದರ್ಶಿ ಕುಂಇ್ ರವರು ಸಭೆಯ ಓದಿ ತಿಳಿಸಿದರು.
ಸಾಮಾಜಿಕ ಆರಣ್ಯಾಧಿಕಾರಿ ವಿದ್ಯಾ ಪಿ.ಡಿ.ಸಭೆಯ ನೋಡಲಾಧಿಕಾರಿಯಾಗಿದ್ದರು.ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಕೆ. ಸಭೆಯ ಅಧ್ಯಕ್ಷೆ ತೆ ವಹಿಸಿದ್ದರು.ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಪಂಚಾಯತು ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸಭೆಯಲ್ಲಿ ಬಾಗವಹಿಸಿದರು.