Site icon Suddi Belthangady

ಕಡಿರುದ್ಯಾವರದಲ್ಲಿ ಯಾಂತ್ರಿಕೃತವಾಗಿ ಭತ್ತದ ಬೇಸಾಯ ‘ಯಂತ್ರಶ್ರೀ’ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕಡಿರುದ್ಯಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಬೆಳ್ತಂಗಡಿ ತಾಲೂಕಿನ ವತಿಯಿಂದ ಮುಂಡಾಜೆ ವಲಯದ ಕಡಿರುದ್ಯಾವರ ಭಾರತಿಯವರ ಮನೆಯಲ್ಲಿ ಯಂತ್ರಶ್ರೀ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಯೋಜನೆಯ ತಾಲೂಕಿನ ಕೃಷಿ-ಅಧಿಕಾರಿಯಾದ ರಾಮ್ ಕುಮಾರ್ ರವರು ಸಾಮಾನ್ಯ ಪದ್ಧತಿ ಮತ್ತು ಯಾಂತ್ರಿಕೃತ ಪದ್ಧತಿಗೆ ಇರುವಂತಹ ವ್ಯತ್ಯಾಸ, ಉತ್ತಮ ಭತ್ತದ ಬೀಜದ ಆಯ್ಕೆ, ಬಿಜೋಪಚಾರ, ಸಸಿ ಮಡಿಗೆ ಮಣ್ಣಿನ ಆಯ್ಕೆ, ಸಸಿ ಮಡಿ ತಯಾರಿ, ನಾಟಿ ಗದ್ದೆಯ ತಯಾರಿ, ಯಂತ್ರದ ಮೂಲಕ ಭತ್ತದ ಸಸಿಯ ನಾಟಿ, ಖರ್ಚು ಮತ್ತು ಆದಾಯದ ಬಗ್ಗೆ ರೈತರೊಂದಿಗೆ ಸಂವಾದದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು.

ಒಕ್ಕೂಟದ ಅಧ್ಯಕ್ಷರಾದ ರತ್ನವತಿ, ಪ್ರಗತಿಪರ ಕೃಷಿಕರಾದ ಸತೀಶ್ ಆರಿಗ, ಆದರ್ಶ ಮತ್ತು ಮೇಲ್ವಿಚಾರಕರಾದ ಜನಾರ್ದನ್, ಸೇವಾ-ಪ್ರತಿನಿಧಿ ಹಾಗೂ ಭತ್ತ ಕೃಷಿ ಅನುಷ್ಠಾನ ಮಾಡುವ ರೈತರು ಉಪಸ್ಥಿತರಿದ್ದರು.
ಯಾಂತ್ರಿಕೃತ ಭತ್ತದ ಬೇಸಾಯ ಮಾಡುವಂತೆ ಆಸಕ್ತ ರೈತರು ಉಪಸ್ಥಿತಿ ಇದ್ದು ಸಂವಾದದ ಮೂಲಕ ಮಾಹಿತಿಯನ್ನು ಪಡೆದುಕೊಂಡರು.

Exit mobile version