Site icon Suddi Belthangady

ಮಂಗಳೂರು ವಿ.ವಿ.ವಲಯ ಮಟ್ಟದ ಕಬ್ಬಡಿ ಪಂದ್ಯಾಟ- ಉಜಿರೆ ಎಸ್‌.ಡಿ.ಎಂ. ಕಾಲೇಜಿಗೆ ಚಾಂಪಿಯನ್

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ATU)ಕಾಲೇಜು ತಂಡದವರು ಮಂಗಳೂರು ವಿಶ್ವವಿದ್ಯಾಲಯದ ಅಂತರ ವಲಯ ಕಬಡ್ಡಿ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಮಂಗಳೂರು ವಿವಿ ಮೈದಾನದಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ಉಜಿರೆ ಎಸ್‌.ಡಿ.ಎಂ. ತಂಡ 12-32 ರಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡವನ್ನು ಮಣಿಸಿ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪುತ್ತೂರಿನ ಇಂಡಸ್ ಕಾಲೇಜು ಮತ್ತು ಕಾಲೇಜು ಸೆಂಟ್ ಫಿಲೋಮಿನಾ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು, ಸುಕೇಶ್ ಉತ್ತಮ ಆಲ್ ರೌಂಡರ್, ಗಗನ್ , ಉತ್ತಮ ರೈಡರ್ ಮತ್ತು ವಿನೋದ್‌ ಉತ್ತಮ ಡಿಫೆಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನಾಲ್ಕನೇ ಸ್ಥಾನ ಗಳಿಸಿತ್ತು.ಅಂತರ ವಲಯ ಕಬಡ್ಡಿ ಟೂರ್ನಿಯ ಪ್ರಶಸ್ತಿ ಗೆದ್ದ ಎಸ್‌ಡಿಎಂ ತಂಡದ ಆಟಗಾರರ ಜೊತೆ ಕೋಚ್ ಕೃಷ್ಣಾನಂದ ರಾವ್ ಮುಂಡಾಜೆ ಮತ್ತು ಮ್ಯಾನೇಜರ್ ಸುದಿನ್ ಉಪಸ್ಥಿತರಿದ್ದರು.ಇದೇ ಕ್ರಿಡಾಂಗಣದಲ್ಲಿ ನಡೆದ ಅಂತರ ಕಾಲೇಜು ಟೂರ್ನಿಯಲ್ಲೂ ತಂಡ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಸೇಂಟ್ ಫಿಲೋಮಿನಾ ತಂಡವನ್ನು ಅದು ಸೋಲಿತ್ತು. ಇಂಡಸ್ ಕಾಲೇಜು ಮೂರನೇ ಸ್ಥಾನ ಮತ್ತು ವಿವಿ ಕ್ಯಾಂಪಸ್ಅಂತರ ಕಾಲೇಜು ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಮಡಿಕೇರಿಯ ನಾಲ್ಕನೇ ಸ್ಥಾನ ಗಳಿಸಿದವು. ಮಾರ್ಷಲ್ ಕಾರ್ಯಪ್ಪ ಸ್ಮಾರಕ ಕಾಲೇಜು ತಂಡ 10ಯಿಂದ ವಿಶ್ವವಿದ್ಯಾಲಯ ಕ್ಯಾಂಪಸ್ ತಂಡವನ್ನು ಮಣಿಸಿತು. ಮಡಂತ್ಯಾರು ಸೇಕ್ರೆಡ್ ಪಾರ್ಟ್ ಕಾಲೇಜು ಮತ್ತು ನಡುಪದವು ಪಿ.ಎ. ಪ್ರಥಮ ದರ್ಜೆ ಕಾಲೇಜು ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕುನೇ ಸ್ಥಾನ ಗಳಿಸಿತು.

Exit mobile version