Site icon Suddi Belthangady

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ

ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಜೂ.17ರಂದು ನೆರವೇರಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿಯಾಗಿರುವ ಶ್ರೀಹರಿ ಶಗ್ರಿತ್ತಾಯ ಆಗಮಿಸಿದ್ದರು.

ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.ತದ ನಂತರ ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಹರಿ ಶಗ್ರಿತ್ತಾಯ ಪ್ರಮಾಣವನವನ್ನು ಬೋಧಿಸಿದರು.ತದನಂತರ ಮಾತನಾಡಿದ ಅವರು ದೀಪ ಹೇಗೆ ತನ್ನ ಪ್ರಕಾಶದ ಮುಖಾಂತರ ಗುರುತಿಸಿಕೊಳ್ಳುತ್ತದೆಯೋ ಅದೇ ರೀತಿ ನಾಯಕ ತನ್ನ ಸೇವೆಯ ಮುಖಾಂತರ ಗುರುತಿಸಿಕೊಳ್ಳಬೇಕು.ನಾಯಕ ಯಾವತ್ತೂ ಭ್ರಮೆಯಲ್ಲಿ ಇರಬಾರದು.ನಾಯಕನಿಗೆ ಯಾವತ್ತೂ ದೂರದೃಷ್ಟಿ ಇರಬೇಕು. ನಾಯಕರುಗಳು ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು.ಜನ ಸೇವೆಯ, ಮಾನವೀಯ ಸಂಬಂಧ ನಾಯಕರುಗಳು ಇಟ್ಟುಕೊಳ್ಳಬೇಕು.ಆಗ ಮಾತ್ರ ಬದಲಾವಣೆ ತರಲು ಸಾಧ್ಯ.ಮಾತ್ರವಲ್ಲದೆ ವಿರೋಧ ಪಕ್ಷದವರ ಜವಾಬ್ದಾರಿಯನ್ನು ಹತ್ತು ಹಲವಾರು ಕಥೆ, ಉದಾಹರಣೆಗಳ ಮುಖಾಂತರ ನುಡಿದರು.ತದ ನಂತರ ಶಾಲಾ ಸಂಚಾಲಕರಾದ ಶ್ರೀಯುತ ಅನಂತ ಪದ್ಮನಾಭ ಭಟ್ ಶಾಲೆಯ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಿನಿಂದ ಒಮ್ಮನಸ್ಸಿನಿಂದ ಭಾಗವಹಿಸಿ ಶಾಲೆಗೆ ಕೀರ್ತಿ ತನ್ನಿ ಎಂದು ಹೊಸದಾಗಿ ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರಿಗೆ ಶುಭ ಹಾರೈಸಿದರು.

ಶಾಲಾ ನಾಯಕ ಜಸ್ವಿನ್ ಮೊದಲಿಗೆ ತನ್ನನ್ನು ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ನೀಡಿದರು.ಹಾಗೂ ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುತ್ತೇವೆ ಮಾತ್ರವಲ್ಲದೆ ಶಾಲಾ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸಿ ಶಾಲಾ ಉನ್ನತಿಗೆ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಮಂತ್ರಿಮಂಡಲದ ಉದ್ದೇಶ, ಮಂತ್ರಿಗಳ ಜವಾಬ್ದಾರಿ,ಸಮಸ್ಯೆ ಬಂದಾಗ ಏನು ಮಾಡಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮವನ್ನು ಭಾರ್ಗವಿ ನಿರ್ವಹಿಸಿ, ಆಶಿತಾ ಸ್ವಾಗತಿಸಿ, ಆದಿತ್ಯ ಧನ್ಯವಾದ ಇತ್ತರು.ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Exit mobile version