Site icon Suddi Belthangady

ಆರಂಬೋಡಿಯಲ್ಲಿ ಜೂ.18ರಂದು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ ವೈದ್ಯಕೀಯ ಶಿಬಿರ

ಆರಂಬೋಡಿ: ಆರಂಬೋಡಿ ಗ್ರಾಮ ಪಂಚಾಯತ್ ಬಳಿಯ ಹೊಕ್ಕಾಡಿಗೊಳಿ ಶಾಲೆಯಲ್ಲಿ ಜೂ.18 ರಂದು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ತಜ್ಞ ವೈದ್ಯರಿಂದ ಬೃಹತ್ ವೈದ್ಯಕೀಯ ಶಿಬಿರ, ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇವರಿಂದ ಉಚಿತ ದಂತ ವೈದ್ಯಕೀಯ ಶಿಬಿರವು ನಡೆಯಲಿದೆ.

ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಇದ್ದು, ಸುತ್ತ ಮುತ್ತಲಿನ ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.

Exit mobile version