Site icon Suddi Belthangady

ಪಟ್ಟೂರಿನ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ವಿಭಾಗದ ಶಿಕ್ಷಣ ದೃಷ್ಟಿಕೋನ ಸಭೆ

ಪಟ್ಟೂರು: ಪಟ್ಟೂರಿನ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ವಿಭಾಗದ ಶಿಕ್ಷಣ ದೃಷ್ಟಿಕೋನ ಕಾರ್ಯಕ್ರಮವು ಶಾಲೆಯ ಯುಕೆಜಿ ತರಗತಿಯಲ್ಲಿ ಜೂನ್ 16ರಂದು ನಡೆಯಿತು.
ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ದೀಪ ಬೆಳಗಿಸಿ, ಪ್ರಪ್ರಥಮವಾಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಆರಂಭ ದಿನಗಳಿಂದ ಈವರೆಗಿನ ಸವಾಲುಗಳ ಬಗ್ಗೆ ಪೋಷಕರಿಗೆ ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ, ಹಾಗೂ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.ನರ್ಸರಿ ವಿಭಾಗದ ಮೇಲ್ವಿಚಾರಕಿ ಸ್ವಾತಿ ಕೆ.ವಿ. ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳ ನಿಯಮಗಳು ಮತ್ತು ವ್ಯವಸ್ಥಿತ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯ ಕಿರಣ್ ಬಲ್ಯಾಯ, ನರ್ಸರಿ ವಿಭಾಗದ ಶಿಕ್ಷಕಿ ವನಿತಾ ಎನ್ ಉಪಸ್ಥಿತರಿದ್ದರು.ಸಭೆಯಲ್ಲಿ ಹೆಚ್ಚಿನ ಪೋಷಕರು ಭಾಗವಹಿಸಿದ್ದು ವಿದ್ಯಾರ್ಥಿಗಳು ಕೂಡ ಆಗಮಿಸಿದ್ದರು. ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು.ಸಂಧ್ಯಾ ಹಾಗೂ ಕು. ಅನುಷಾ ಪ್ರಾರ್ಥಿಸಿದರು.

Exit mobile version