Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ದೊಂಪದಪಲ್ಕೆ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯರಾದ ಓಡಲ ಸುರೇಶ್ ಆಚಾರ್ ಅವರಿಗೆ ಸನ್ಮಾನ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ದೊಂಪದಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಓಡಲ ಶ್ರೀ ಸುರೇಶ್ ಆಚಾರ್ ರವರಿಗೆ ಶಾಲಾ ವತಿಯಿಂದ ಗೌರವ ಸಮರ್ಪಣೆ ಜರಗಿತು.ಬೆಳಾಲು ಪ್ರೌಢಶಾಲೆಗೆ ನೀಡಿದ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಶ್ರೀಯುತರನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಹಾಗೂ ಶಿಕ್ಷಕರ ವೃಂದದವರು ಸೇರಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ವಾರಿಜ ಎಸ್ ಗೌಡ, ಶ್ರೀಮತಿ ರಾಜಶ್ರೀ, ಜಗದೀಶ್ ಎನ್, ಗಣೇಶ್ವರ ಎಂ, ರವಿಚಂದ್ರ ಜೈನ್, ಸುಮನ್ ಯು ಎಸ್ , ಚಿತ್ರಾ ತಿ ಪಿ ಎಚ್, ಸುಂದರ ಡಿ ಇವರು ಉಪಸ್ಥಿತರಿದ್ದರು.

Exit mobile version