Site icon Suddi Belthangady

ಇಳಂತಿಲ ಗ್ರಾಮ ಸಭೆ

ಇಳಂತಿಲ: ಗ್ರಾಮ ಪಂಚಾಯತ್ ಇಳಂತಿಲ ಇಲ್ಲಿಯ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಅಧ್ಯಕ್ಷತೆಯಲ್ಲಿ ಇಳಂತಿಲ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ಜೂ.15 ರಂದು ನಡೆಯಿತು.

ನೋಡಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗ ಇಲಾಖೆಯ ಜೋಸೆಫ್ ಆಗಮಿಸಿದ್ದರು.ಶಿಕ್ಷಣ ಇಲಾಖೆಯಿಂದ ಮಹ್ಮದ್ ಶರೀಫ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಂದನ, ಕಂದಾಯ ಇಲಾಖೆಯಿಂದ ಇಳಂತಿಲದ ಗ್ರಾಮಕರಣಿಕ ಲಿಂಗಾರಾಜು, ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಗಫೂರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಪ್ರಿತ್.ಪಿ, ಗ್ರಾ.ಪಂ.ಸದಸ್ಯರುಗಳಾದ ಉಷಾ.ಯು, ವಿಜಯ ಕುಮಾರ್.ಕೆ, ಸಿದ್ದಿಕ್, ರೇಖಾ, ವಸಂತ ಶೆಟ್ಟಿ, ತಿಮ್ಮಪ್ಪ ಗೌಡ, ರಮೇಶ್.ಎನ್, ಜಾನಕಿ, ನುಸ್ರತ್, ಉಪಸ್ಥಿತರಿದ್ದರು.

ಪಿಡಿಒ ಚೆನ್ನಪ್ಪ ನಾಯ್ಕ್.ಬಿ.ಸ್ವಾಗತಿಸಿದರು. ಸಭೆಯಲ್ಲಿ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನೆರೆದಿದ್ದರು.

Exit mobile version