Site icon Suddi Belthangady

ಓಡಿಲ್ನಾಳ ದ.ಕ.ಜಿ.ಪಂ.ಉ.ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿ ಮಂಡಲ ರಚನೆ

ಬೆಳ್ತಂಗಡಿ: ದ.ಕ.ಜಿ.ಪಂ ಉನ್ನತೀಕರಿಸಿದ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳ ಇಲ್ಲಿ ಜೂ.3 ರಂದು ಶಾಲಾ ಮಂತ್ರಿ ಮಂಡಲ ರಚನೆ ಮಾಡಲಾಯಿತು.

ಚುನಾವಣಾ ಪ್ರಕ್ರಿಯೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಚುನಾವಣಾ ಪ್ರಚಾರ, ಎಜೆಂಟ್ ನೇಮಕ ಪ್ರಕ್ರಿಯೆಯನ್ನು ವಿಧ್ಯಾರ್ಥಿಗಳಿಗೆ ಪರಿಚಯಾತ್ನಕವಾಗಿ ಮತದಾನ ಮಾಡಲಾಯಿತು.

ಶಾಲಾ ನಾಯಕನಾಗಿ ಮೊಹಮ್ಮದ್ ಫಾಝಿಲ್ 8‌ನೇ ತರಗತಿ ಹಾಗೂ ಉಪನಾಯಕನಾಗಿ ಯಶ್ವಿತ್ ಶೆಟ್ಟಿ 7 ನೇ ತರಗತಿ ಇವರು ಆಯ್ಕೆಯಾದರು.

ವಿರೋಧ ಪಕ್ಷದ ನಾಯಕರಾಗಿ ಚರಣ್ 8 ನೇ ತರಗತಿ ಹಾಗೂ ವಿರೋಧ ಪಕ್ಷದ ಉಪನಾಯಕನಾಗಿ ಫಾತಿಮಾತ್ ರಿಹಾನ್ ಆಯ್ಕೆಯಾದರು.ಮತ್ತು ಮಂತ್ರಿ ಮಂಡಲದ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯ ಶಿಕ್ಷಕರಿಂದ ವಿಧ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

ಶಿಕ್ಷಕ ವೃಂದದವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಚುನಾವಣಾ ಪ್ರಕ್ರಿಯೆ ನಡಿಯಿತು. 

Exit mobile version