ಜೂ.13ರಂದು ಸ.ಕಿ.ಪ್ರಾ.ಶಾಲೆ ಸಿದ್ಧವನ ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಸೇವಾಭಾರತಿ – ಕನ್ಯಾಡಿ 2 ಇವರ ವತಿಯಿಂದ ಶಾಲಾಬ್ಯಾಗ್, ಛತ್ರಿ, ಪುಸ್ತಕ ಮತ್ತಿತರ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ, ಇತರ ಪದಾಧಿಕಾರಿಗಳಾದ ಚಂದನ್ ಗುಡಿಗಾರ್, ಚೇತನ್, ಅಪೂರ್ವ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಮ .ಕೆ ಮತ್ತು ಶಾಲಾ ಶಿಕ್ಷಕರು, ಎಸ್.ಡಿ.ಯಂ.ಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.