Site icon Suddi Belthangady

ಗ್ರಾ.ಯೋಜನೆಯ ಕುತ್ಲೂರು ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ, ಕುತ್ಲೂರು ಕಾರ್ಯಕ್ಷೇತ್ರದಲ್ಲಿ ಮಂಜುಶ್ರೀ ಭಜನಾ ಮಂದಿರದಲ್ಲಿ ಯಂತ್ರಶ್ರೀ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಗ್ರಾ.ಯೋ. ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ ಮಾಹಿತಿ ನೀಡಿ, ಮುಂಗಾರು ಭತ್ತ ಕೃಷಿಯಲ್ಲಿ ಯಂತ್ರಶ್ರೀ ಮಾದರಿಯಲ್ಲಿ ಕೃಷಿ ಮಾಡಿದರೆ ಕಡಿಮೆ ಖರ್ಚು ಮತ್ತು ಕಡಿಮೆ ಸಮಯದಲ್ಲಿ ಭತ್ತದ ಕೃಷಿ ಮಾಡಬಹುದು. ಭೂಮಿಯನ್ನು ಹದ ಗೊಳಿಸುವುದರಿಂದ ಕೊಯ್ಲುವರೆಗೂ ಸಂಪೂರ್ಣ ಯಾಂತ್ರಿಕೃತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶ. ಭತ್ತ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಭತ್ತ ಕೃಷಿಯನ್ನು ಆಕರ್ಷಣಿಯವಾಗಿ ಮಾಡುವುದು ಇದರ ಪ್ರಮುಖ ಉದ್ದೇಶ. ವೆಚ್ಚದಲ್ಲಿ ಕಡಿತಗೊಂಡು ಇಳುವರಿ ಹೆಚ್ಚಳವನ್ನು ಗಮನಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಅಣ್ಣಿ ಎಂ.ಕೆ, ಒಕ್ಕೂಟದ ಉಪಾಧ್ಯಕ್ಷೆ ಜಯಂತಿ ಹಾಗೂ ರೋಹನ್, ರವೀಶ್, ಪೂವಪ್ಪ, ಸೇವಾ ಪ್ರತಿನಿಧಿ ಕೇಶವ ಪೂಜಾರಿ‌ ಉಪಸ್ಥಿತರಿದ್ದರು. ರೈತ ತಂಡದ ಸದಸ್ಯರು ಭಾಗವಹಿಸಿ ಇದರ ಪ್ರಯೋಜನ ಪಡೆದರು.

Exit mobile version