Site icon Suddi Belthangady

ನಡ ಸ.ಪ್ರೌ.ಶಾಲೆ – ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ: ಶಾಲಾ ನಾಯಕಿ ಇಂಚಿತಾ, ಉಪ ನಾಯಕನಾಗಿ ಹೃತಿಕ್ ಆಯ್ಕೆ

ನಡ: ಸರಕಾರಿ ಪ್ರೌಢಶಾಲೆ ನಡ ಇದರ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಶಾಲಾ ನಾಯಕಿಯಾಗಿ ಕುಮಾರಿ ಇಂಚಿತಾ 9ನೇ ತರಗತಿ, ಹಾಗೂ ಉಪ ನಾಯಕನಾಗಿ 8 ನೇ ತರಗತಿಯ ಹೃತಿಕ್ ಆಯ್ಕೆಯಾಗಿರುತ್ತಾರೆ.

ಸಾರ್ವತ್ರಿಕ ಮತದಾನದಲ್ಲಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯ ಅರಿವು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ, ಪೂರ್ತಿ ಮತದಾನವನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆಸಲಾಗಿತ್ತು.

ಶಾಲಾ ನಾಯಕ/ ಉಪನಾಯಕ ಮಾತ್ರವಲ್ಲದೆ ಉಳಿದ ಸ್ಥಾನಗಳಿಗೂ ಚುನಾವಣೆ ನಡೆಸಲಾಗಿದ್ದು ಕೃಷಿಮಂತ್ರಿಯಾಗಿ 9ನೇ ತರಗತಿಯ ಧನುಷ್,ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಪ್ರಮಿತ್, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ 9ನೇ ತರಗತಿಯ ಅಪೇಕ್ಷಾ, ಆಹಾರ ಮಂತ್ರಿಯಾಗಿ 9ನೇ ತರಗತಿಯ ಫಾತಿಮತ್ ರಾಫಿಯಾ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಯಾಗಿ 9ನೇ ತರಗತಿ ಮನೀಷ್, ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಧನ್ಯಶ್ರೀ ಹಾಗೂ ಗೃಹ ಮಂತ್ರಿಯಾಗಿ 9 ನೇ ತರಗತಿ ಅಕ್ಷತ್ ಚುನಾವಣೆಯ ಮೂಲಕ ಆಯ್ಕೆಗೊಂಡರು.

ಸಮಾಜ ವಿಜ್ಞಾನ ಶಿಕ್ಷಕ ಶಿವಪುತ್ರ ಸುಣಗಾರ ಚುನಾವಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು.

Exit mobile version