Site icon Suddi Belthangady

ಮಿತ್ತಬಾಗಿಲು ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಸಮಾರಂಭ

ಮಿತ್ತಬಾಗಿಲು: ಮಿತ್ತಬಾಗಿಲು ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ಸಮಾರಂಭ ಏರ್ಪಡಿಸಿದ್ದು ಶಾಲೆಯ ಎಲ್ಲಾ ಮಕ್ಕಳಿಗೆ ಮುರಳಿ.ಬಿ ವಕೀಲರು ನೋಟರಿ ಪಬ್ಲಿಕ್ ಬೆಳ್ತಂಗಡಿ ಇವರು ಪುಸ್ತಕ ವಿತರಿಸಿ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹಿತವಚನ ನೀಡಿದರು.ಹಾಗೆಯೇ ಅವರ ಕುಟುಂಬಸ್ಥರಾದ ಮನೋರಮ ಮಕ್ಕಳಾದ ಮಯೂರ ಹಾಗೂ ಮಂದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಹೈದರ್ ಆಲಿ ವಹಿಸಿ, ಸಮಾರಂಭಕ್ಕೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಅತಿಥಿಗಳಾಗಿ ಕಾಜೂರು ದರ್ಗಾ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಜೆ.ಎಚ್, ಸದಸ್ಯರಾದ ಮುಹಮ್ಮದ್ ಆಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಮಿತ್ತಬಾಗಿಲು ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ ಪೋಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ರಾಜಿ ಮೋಳ್ ಮಾಡಿದರು, ಅಣ್ಣಪ್ಪ.ಎಸ್ ಇವರು ಧನ್ಯವಾದ ಸಲ್ಲಿಸಿದರು.ರವಿ.ಪಿ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು.

Exit mobile version