Site icon Suddi Belthangady

ಪುತ್ತೂರಿನಲ್ಲಿ ನಡೆದ ಕಾಮರ್ಸ್ ಆಂಡ್ ಡಿಸೈನ್ ಫೆಸ್ಟ್ ನಲ್ಲಿ ಶ್ರೀ ಗುರುದೇವ ಪದವಿ ಕಾಲೇಜಿಗೆ ಪ್ರಶಸ್ತಿ

ಬೆಳ್ತಂಗಡಿ: ವಿದ್ಯಾರ್ಥಿ ಬದುಕು ಅವಕಾಶಗಳ ಪ್ರಪಂಚ. ವಿದ್ಯಾರ್ಥಿಗಳು ಶಾಲಾ – ಕಾಲೇಜಿನಲ್ಲಿ ಸಿಗುವ ಸಾಹಿತ್ಯಿಕ, ಸಾಂಸ್ಕಂತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುವ ಹುಮ್ಮಸ್ಸನ್ನು ರೂಢಿಸಿಕೊಂಡು ತನ್ನನ್ನು ತಾನು ಬೆಳೆಸಿಕೊಳ್ಳಬೇಕು ಎಂದು ಬೆಳ್ತಂಗಡಿ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್‍ನ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಅವರು ಜೂ 9 ರಂದು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುತ್ತೂರು ಅಕ್ಷಯ ಕಾಲೇಜು ವತಿಯಿಂದ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಕಾಮರ್ಸ್ ಆಂಡ್ ಡಿಸೈನ್ ಫೆಸ್ಟ್ ನಲ್ಲಿ ದ್ವಿತೀಯ ಚಾಂಪಿಯನ್ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಮುಕ್ತ ಅವಕಾಶವನ್ನು ನೀಡುತ್ತಾ ಬಂದಿದ್ದೇವೆ. ಅವರ ಭಾಗವಹಿಸುವ ಸಂಪೂರ್ಣ ಖರ್ಚುವೆಚ್ಚದ ಜತೆ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಉಪನ್ಯಾಸಕರು ಪಠ್ಯದ ಜತೆಗೆ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಬೇಕು ಎಂದರು.ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ’34 ಕಾಲೇಜುಗಳ ಸ್ಪರ್ಧೆಯ ಮಧ್ಯೆ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅಮೋಘವಾದುದು. ಸಕಾರಾತ್ಮಕ ವಿಚಾರದಲ್ಲಿ ಅಂಜಿಕೆಯಿಲ್ಲದೆ ಭಾಗವಹಿಸುವ ಮನೋಸ್ಥಿತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದರು.

ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ಬಿ.ಎ. ಮಾತನಾಡಿ ಶುಭ ಹಾರೈಸಿದರು.ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಾದ ಪ್ರೇಮಸಾಗರ್, ಜ್ಯೋತಿ, ಕಾವ್ಯ ಅನಿಸಿಕೆ ವ್ಯಕ್ತಪಡಿಸಿದರು.ಮಲ್ಟಿ ಟಾಸ್ಕ್ ವಿಭಾಗದಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿ ಪ್ರೇಮ್ ಸಾಗರ್ ಪ್ರಥಮ ಸ್ಥಾನವನ್ನು, ಮೂವಿ ಸ್ಪೂಪ್ ಸ್ಪರ್ಧೆಯಲ್ಲಿ ದ್ವಿತೀಯ ಬಿ ಕಾಂ ವಿದ್ಯಾರ್ಥಿಗಳಾದ ಚೇತನ್, ವೀರೇಶ್, ಆದಿತ್ಯ, ದುರ್ಗಾಪ್ರಸಾದ್, ಹಸ್ತವಿ, ತೇಜಾಕ್ಷಿ, ವಿಶ್ಮಿತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರ ಲಭಿಸಿದೆ.ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಸತೀಶ್, ಆಂಗ್ಲ ಭಾಷಾ ಉಪನ್ಯಾಸಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version