Site icon Suddi Belthangady

ಬಂದಾರು ಗ್ರಾ.ಪಂ ದ್ವಿತೀಯ ಸುತ್ತಿನ ಗ್ರಾಮ ಸಭೆ

ಬಂದಾರು: ಬಂದಾರು ಗ್ರಾಮ ಪಂಚಾಯತ್ ನ 2022-23 ನೇ ದ್ವಿತೀಯ ಸುತ್ತಿನ ಗ್ರಾಮ ಸಭೆ ಬಂದಾರು ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜೂ.9 ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಜೋಸೆಫ್ ರವರು ಉಪಸ್ಥಿತರಿದ್ದರು.

ಬಂದಾರು ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷ ಗಂಗಾಧರ ಪೂಜಾರಿ ಹಾಗೂ ಪಂಚಾಯತು ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

2022 ರಂದು ನಡೆದ ಗ್ರಾಮಸಭೆಯ ಪಾಲನಾ ವರದಿಯನ್ನು ಬಂದಾರು ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಸಭೆಯಲ್ಲಿ ಮಂಡಿಸಿದರು.ಪಂಚಾಯತು ವ್ಯಾಪ್ತಿಯ ಕಾಮಗಾರಿಯ ಬಗ್ಗೆ ಗುಮಾಸ್ತ ದಿನಕರ ಗೌಡ ಸಭೆಯಲ್ಲಿ ಓದಿ ತಿಳಿಸಿದರು.

Exit mobile version