Site icon Suddi Belthangady

ಜನಸಾಮಾನ್ಯರ, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು- ಆದಿತ್ಯ ಕೊಲ್ಲಾಜೆ: ಪತ್ರಿಕಾ ಗೋಷ್ಠಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದಿಂದ ಸರ್ವೋದಯ ಕರ್ನಾಟಕ ಪಕ್ಷದಿಂದ ರಾಜ್ಯದಲ್ಲಿ ಬೆಳ್ತಂಗಡಿ ಸೇರಿ 8 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಮೇಲುಕೋಟೆಯಲ್ಲಿ ಗೆಲುವು ಸಾಧಿಸಿದೆ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಜನಸಾಮಾನ್ಯರು, ರೈತರು, ಕೂಲಿಕಾರರು, ಬಡವರು ಮತ್ತು ಮಧ್ಯಮ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಪ್ರೇರೇಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸರ್ವೋದಯ ಕರ್ನಾಟಕ ಪಕ್ಷದ ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ಹೇಳಿದರು.

ಅವರು ಜೂ.9 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ತಾಲೂಕಿನಲ್ಲಿ ಈ ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಚುನಾವಣಾ ಪ್ರಚಾರದ ವೇಳೆ ಕಂಡಿದ್ದೇನೆ. ಇದಕ್ಕೆ ವ್ಯವಸ್ಥೆಯಲ್ಲಿ ಉತ್ತಮ ಆರೋಗ್ಯ, ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವಿದ್ದು, ತಾಲ್ಲೂಕಿನಾದ್ಯಂತ ಸಹಿ ಅಭಿಯಾನದ ಮೂಲಕ ಈ ಉಪಕ್ರಮಕ್ಕೆ ಚಾಲನೆ ನೀಡಾಲಗುವುದು. ಈ ಉಪಕ್ರಮಕ್ಕೆ ಸಾರ್ವಜನಿಕರ ಬೆಂಬಲವನ್ನು ಕೋರಿದರು. ಈ ತಾಲೂಕನ್ನು ಭ್ರಷ್ಟಚಾರಕ್ಕೆ ಬಳಸಿಕೊಂಡಿದ್ದು, ಬೆಳ್ತಂಗಡಿಯ ಜನರೊಂದಿಗೆ ಹೋರಾಟ ಮತ್ತು ಚಳುವಳಿ ಮೂಲಕ ಈ ಪದ್ಧತಿಗೆ ಕಡಿವಾಣ ಹಾಕುವುದು. ಬದಲಾವಣೆ ತರಲು ತಾಲೂಕು ಮತ್ತು ಜಿಲ್ಲೆಯ ಸಮಾನ ಮನಸ್ಕ ಜನರು ಮತ್ತು ಹೋರಾಟಗಾರರಿಂದ ಬೆಂಬಲವನ್ನು ಕೋರಲಾಗುವುದು.ಕಳೆದ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿದ ಜನತೆಗೆ ಧನ್ಯವಾದಗಳು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ, ತಾಲೂಕು ಅಧ್ಯಕ್ಷ ಅವಿನಾಶ್ ಕುಮಾರ್, ತಾಲೂಕು ಕಾರ್ಯದರ್ಶಿ ದೇವಪ್ಪ ನಾಯ್ಕ, ಉಪಾಧ್ಯಕ್ಷ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.

Exit mobile version