Site icon Suddi Belthangady

ಧರ್ಮಸ್ಥಳ ಶ್ರೀ.ಮಂ.ಅ.ಪ್ರೌಢಶಾಲಾ ಮುಖ್ಯೋಪಾದ್ಯಾಯರಾಗಿ ಎನ್.ಪದ್ಮರಾಜ್

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದ ಮುಖ್ಯೋಪಾದ್ಯಾಯರಾಗಿ ಎನ್ ಪದ್ಮರಾಜ್ ಅಧಿಕಾರ ಸ್ವೀಕರಿಸಿದರು.ಉಜಿರೆಯ ಎಸ್ ಡಿ ಎಂ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಪದ್ಮರಾಜ್ ರವರು ಧರ್ಮಸ್ಥಳ ಶಾಲೆಯಲ್ಲಿ ಇಂದು ಕಾರ್ಯಾರಂಭಿಸಿದ್ದಾರೆ.

ಎಸ್ ಡಿ ಎಂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ್ ಶೆಟ್ಟಿ, ಮಾನವ ಸಂಪನ್ಮೂಲ‌ ಅಧಿಕಾರಿ ಕೃಷ್ಣಮಯ್ಯ ಇಂದು ಅಧಿಕಾರ ಹಸ್ತಾಂತರದ ವೇಳೆ ಉಪಸ್ಥಿತರಿದ್ದರು.

ಎನ್.ಪದ್ಮರಾಜ್ 29 ವರ್ಷಗಳ ಅದ್ಯಾಪಕ ಸೇವೆ:
ಎನ್.ಪದ್ಮರಾಜ್ ರವರು 29 ವರ್ಷಗಳಿಂದ ಉಜಿರೆಯ ಎಸ್ ಡಿ ಎಂ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ಪ್ರಾದ್ಯಾಪಕರಾಗಿದ್ದರು. ಈಗ ಧರ್ಮಸ್ಥಳ ಶಾಲೆಯ ಅದ್ಯಾಪಕರು ಪದ್ಮರಾಜ್ ರವರಿಗೆ ಪ್ರೀತಿ ಪೂರ್ವಕ ಸ್ವಾಗತ ಕೋರಿದ್ದಾರೆ.

Exit mobile version