Site icon Suddi Belthangady

ಉಜಿರೆ: ಎಸ್.ಡಿ.ಎಂ ಕಾಲೇಜಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಶೈಕ್ಷಣಿಕ ಪ್ರವಾಸ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇದರ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಕುದುರೆಮುಖ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಎರಡು ದಿನಗಳ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗಿತ್ತು.

ಮೊದಲ ದಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಭಾಗಗಳಾದ ಭಗವತಿ ನೇಚರ್ ಕ್ಯಾಂಪ್, ಲಕ್ಯ ಅಣೆಕಟ್ಟು ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಭೌಗೋಳಿಕ ಪ್ರಾಮುಖ್ಯತೆ ಹಾಗೂ ಸಸ್ಯ ವೈವಿಧ್ಯತೆಯನ್ನು ಅರಿತುಕೊಂಡರು. ಅಲ್ಲಿನ ವಲಯ ಅರಣ್ಯಾಧಿಕಾರಿಯಾದ ಮಹಮ್ಮದ್ ಅರಣ್ಯಗಳ ಮಹತ್ವ ಹಾಗೂ ಪರಿಸರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಎರಡನೇಯ ದಿನ ಸಂಸೆ ಚಹಾ ಎಸ್ಟೇಟ್, ಸೂರುಮನೆ ಜಲಪಾತ, ಮೈದಾಡಿಗುಡ್ಡ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳು ಸಸ್ಯಶಾಸ್ತ್ರದ ಜ್ಞಾನದ ಜೊತೆಗೆ ಮನರಂಜನೆಯನ್ನೂ ಪಡೆದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಪ್ರಾಂಶುಪಾಲರೂ ಆದ ಡಾ. ಕುಮಾರ ಹೆಗ್ಡೆ ಬಿ. ಎ. ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶಕುಂತಲಾ, ಶ್ರೀ ಅಭಿಲಾಷ್ ಕೆ. ಎಸ್. ಹಾಗೂ ಕುಮಾರಿ ಮಂಜುಶ್ರೀ ಮತ್ತು ಪ್ರಯೋಗಾಲಯದ ಸಹಾಯಕರಾದ ಶ್ರೀ ಜಿನ್ನಪ್ಪ ಇವರೂ ಸಹ ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

Exit mobile version