ಮಚ್ಚಿನ: ಸ್ನೇಹ ಕ್ಲಿನಿಕ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಚ್ಚಿನ ಇದರ ಸಹಯೋಗದೊಂದಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಇಲ್ಲಿ “ಹದಿಹರೆಯದ ಆರೋಗ್ಯ ದಿನಾಚರಣೆ” ಹಮ್ಮಿಕೊಳ್ಳಲಾಯಿತು.
ತಾ. ಸಾ.ಆಸ್ಪತ್ರೆ ಬೆಳ್ತಂಗಡಿ ಆಪ್ತ ಸಮಾಲೋಚಕಿ ರಾಷ್ಟ್ರೀಯ ಕಿಶೋರ ಸ್ವಾಸ್ತ್ಯ ಕಾರ್ಯಕ್ರಮದ ರಮ್ಯ.ಬಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಹದಿ ಹರೆಯದಲ್ಲಿ ಗಂಡು ಹೆಣ್ಣಿನಲ್ಲಿ ಆಗುವ ದೈಹಿಕ ಬದಲಾವಣೆ, ಭಾವನಾತ್ಮಕ ಬದಲಾವಣೆ ಹಾಗೂ ಸಾಮಾಜಿಕ ಬದಲಾವಣೆ ಬಗ್ಗೆ ಅರಿವು ಹಾಗೂ ನಿರ್ವಹಣೆ ಮತ್ತು ಋತುಚಕ್ರದ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಅಕ್ಷತಾ ಅಧ್ಯಕ್ಷತೆಯನ್ನು ವಹಿಸಿದ್ದರು.ಆಶಾ ಕಾರ್ಯಕರ್ತೆ ಪದ್ಮಾವತಿ ಉಪಸ್ಥಿತರಿದ್ದರು.
ಶುಶ್ರೂಷಕಿ ದಿವ್ಯಾ ಸ್ವಾಗತಿಸಿದರು. ಹರಿಣಾಕ್ಷಿ ಶಿಕ್ಷಕಿ ವಂದಿಸಿದರು.