Site icon Suddi Belthangady

ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಗೆ ಸತತ ಎಂಟನೇ ಬಾರಿಗೆ ಶೇ.100 ಫಲಿತಾಂಶ

ಬೆಳ್ತಂಗಡಿ: ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯ ಮರು ಮೌಲ್ಯಮಾಪನದ ಫಲಿತಾಂಶವು ಪ್ರಕಟವಾಗಿದ್ದು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲೂಹ ಮರಿಯಮ್(605) , ಪ್ರತೀಕ್ಷಾ ದೊಡಮನಿ(600) , ಬಿ ರೋಹನ್ (597) ಹಾಗೂ ಜೋಶನ್ ರಫಾಯೆಲ್ ಡಿಸೋಜ (583) ಹೆಚ್ಚುವರಿ ಅಂಕಗಳನ್ನು ಗಳಿಸಿರುತ್ತಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 62 ವಿದ್ಯಾರ್ಥಿಗಳಲ್ಲಿ 17 ಉನ್ನತ ಶ್ರೇಣಿ, 23 ಪ್ರಥಮ ಶ್ರೇಣಿಯಲ್ಲಿ ಹಾಗೂ 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ನೂರು ಶೇಕಡಾ ಫಲಿತಾಂಶವು ಬಂದಿರುತ್ತದೆ.

ಶಾಲಾ ನೂತನ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಂ .ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

Exit mobile version