Site icon Suddi Belthangady

ತೆಕ್ಕಾರು: ಗ್ರಾ.ಪಂ ಸಿಬ್ಬಂದಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು- ಸಂತ್ರಸ್ತರ ವಿರುದ್ಧವೇ ಆರೋಪಿಗಳಿಂದ ಜಾತಿನಿಂದನೆ ಪ್ರಕರಣ

ಬೆಳ್ತಂಗಡಿ: ತೆಕ್ಕಾರು ಪಂಚಾಯತ್ ಸಿಬ್ಬಂದಿಗಳ ಮೇಲೆ ಪಂಚಾಯತ್ ಸದಸ್ಯೆ ನಡೆಸಿದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದ್ದು ಇದೀಗ ಸಂತ್ರಸ್ತರ ವಿರುದ್ಧವೇ ಆರೋಪಿಗಳು ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ತನಕ ತೆಕ್ಕಾರು ಪಂಚಾಯತ್ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟಿಸಲು ಸಿದ್ಧರಾಗಿದ್ದಾರೆ.ಇನ್ನು ತೆಕ್ಕಾರು ಪಂಚಾಯತ್ ಕಚೇರಿಯ ಸೇವೆ ಸ್ಥಗಿತಗೊಳಿಸಿ E.0 ಮುಖಾಂತರ ಮನವಿ ಸಲ್ಲಿಸಲಿದ್ದಾರೆ.ಈ ಮೂಲಕ ಪರಿಹಾರ ಸಿಗದಿದ್ದಲ್ಲಿ ರಾಜ್ಯದ ಎಲ್ಲಾ ನೌಕರರನ್ನು ಸೇರಿಸಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಹೆಚ್ಚಿದೆ.
ಇನ್ನು ಸಿಬ್ಬಂದಿಗಳ ಮೇಲೆ ಮಾಡಿದ ಸುಳ್ಳು ಕೇಸುಗಳನ್ನು ತಕ್ಷಣವೇ ಹಿಂಪಡೆಯಬೇಕು.ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೆ ಪಂಚಾಯತ್ ಕಚೇರಿಗೆ ಸಂಬಂಧಿಸಿದ ಸಾರ್ವಜನಿಕ ಯಾವುದೇ ಕೆಲಸ ಕಾರ್ಯಗಳನ್ನು ನಡೆಸದೇ ಪ್ರತಿಭಟಿಸಲಿದ್ದೇವೆ ಎಂದು ತೆಕ್ಕಾರು ಪಂಚಾಯತ್ ಸಿಬ್ಬಂದಿಗಳು ಹೇಳಿದ್ದಾರೆ.ಈ ನಿಟ್ಟಿನಲ್ಲಿ ಇವತ್ತಿನಿಂದ ತೆಕ್ಕಾರು ಪಂಚಾಯತ್ ಕಚೇರಿ ಸೇವೆಗಳು ಸಾರ್ವಜನಿಕರಿಗೆ ಸಿಗುವುದು ಕಷ್ಟ ಸಾಧ್ಯ.ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೆ ಪಂಚಾಯತ್ ಕಚೇರಿಗೆ ಸಂಬಂಧಿಸಿದ ಸಾರ್ವಜನಿಕ ಯಾವುದೇ ಕೆಲಸ ಕಾರ್ಯಗಳನ್ನು ನಡೆಸದೇ ಪ್ರತಿಭಟಿಸಲಿದ್ದೇವೆ ಎಂದು ತೆಕ್ಕಾರು ಪಂಚಾಯತ್ ಸಿಬ್ಬಂದಿಗಳು ಹೇಳಿದ್ದಾರೆ.

Exit mobile version