
ಕುಪ್ಪೆಟ್ಟಿ: ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಶಾಲಾ ಮಕ್ಕಳಿಗೆ ಪುಸ್ತಕ,ಬ್ಯಾಗ್ ವಿತರಣೆ ಮಾಡಲಾಯಿತು.ಸುಮಾರು 47 ವಿದ್ಯಾರ್ಥಿಗಳಿಗೆ 55,000 ಸಾವಿರ ಮೊತ್ತದ ಪುಸ್ತಕ, ಬ್ಯಾಗ್, ಪೆನ್ನು,ಪೆನ್ಸಿಲ್ ಇತ್ಯಾದಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ನಾಯ್ಕ್ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ಭಟ್ ಹಲೇಜಿ ಗುತ್ತಿಗೆದಾರರು ಮೆಸ್ಕಾಂ, ಸಂದೀಪ್ ಕುಪ್ಪೆಟ್ಟಿ ಅಧ್ಯಕ್ಷರು ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ರಂಜಿತ್ ದರ್ಮಾಡಿ ಅವರು ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಸಂಪೂರ್ಣ ಖರ್ಚು- ವೆಚ್ಚವನ್ನು ಊರಿನ ಗಣ್ಯರಾದ ಅತುಲ್ ಕುಮಾರ್ ಹಲೇಜಿ ಮತ್ತು ಸುಧೀರ್ ಕುಮಾರ್ ಹಲೇಜಿ ಅವರು ನೀಡಿರುತ್ತಾರೆ. ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ರೋಹಿತ್ ಶೆಟ್ಟಿ ಸ್ವಾಗತಿಸಿದರು, ಪ್ರವೀಣ್ ರೈ ಸರ್ವರಿಗೂ ವಂದಿಸಿದರು.