Site icon Suddi Belthangady

ಒಡಿಶಾ ಭೀಕರ ರೈಲು ದುರಂತ : ಬೆಳ್ತಂಗಡಿಯ ಯಾತ್ರಾರ್ಥಿಗಳು ಅಪಾಯದಿಂದ ಪಾರು

ಬೆಳ್ತಂಗಡಿ: ವೇಣೂರಿನ ಮೂವರು, ಬೆಳ್ತಂಗಡಿ ತಾಲೂಕಿನ 21ಮಂದಿ, ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ಇವರು ಜೈನರ ತೀರ್ಥಕ್ಷೇತ್ರಗಳಿಗೆ ಯಾತ್ರೆ ಹೊರಟಿದ್ದರು. ಇವರು ವೇಣೂರಿನಿಂದ ಕಳಸಕ್ಕೆ ತೆರಳಿ ಅಲ್ಲಿಂದ 110 ಮಂದಿ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು.

ಗಡಕ್ ಎಂಬ ಶಬ್ದ ಬಂತು, ರೈಲು ನಿಂತಿತು!ವಿಚಾರ ತಿಳಿದಾಗ ಗದ್ಗತೀತರಾದೆವು:

ಅಪಘಾತವಾದ ರೈಲಿನಲ್ಲಿದ್ದ ಯಾತ್ರಿ ಅಶಾಲತಾ ವೇಣೂರು ಅವರು ರೂರಲ್‌ಎಕ್ಸ್‌ಪ್ರೆಸ್ ನ್ಯೂಸ್ ಜತೆ ಮಾತನಾಡಿ, ಜೂ. 1ರಂದು ಬೆಳಿಗ್ಗೆ ಬೆಂಗಳೂರಿನಿಂದ ಕಲ್ಕತ್ತಕ್ಕೆ ಹೊರಟಿದ್ದೆವು.ಉಜಿರೆ, ಮೂಡಬಿದಿರೆ ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ 21 ಮಂದಿ ಇದ್ದೇವೆ. ನಾವು ಸುಮಾರು ನಿನ್ನೆ ಸಂಜೆ 7.30ರ ಗಂಟೆಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಏಕಾಏಕಿ ಶಬ್ದದೊಂದಿಗೆ ಇಡೀ ರೈಲು ಅಲುಗಾಡಿದ ಅನುಭವ ಆಯಿತು.ತಕ್ಷಣ ರೈಲನ್ನು ನಿಲ್ಲಿಸಿದರು. ಏನಾಯಿತು ಎಂದು ತಿಳಿದುಕೊಳ್ಳುವಷ್ಟರಲ್ಲಿ ರೈಲಿನ ಕೊನೆಯ ೪ ಬೋಗಿಗಳಿಗೆ ಬೇರೊಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಬಂತು. ವಿಚಾರ ತಿಳಿದು ಗದ್ಗತೀತರಾದೆವು. ಕೆಲವರು ಘಟನಾ ಸ್ಥಳಕ್ಕೆ ಹೋದರು. ನಾವು ಘಟನಾ ಸ್ಥಳಕ್ಕೆ ತೆರಳಲಿಲ್ಲ. ಮಧ್ಯರಾತ್ರಿ 1.30ರ ಗಂಟೆಗೆ ರೈಲು ಮತ್ತೆ ಹೊರಟಿತು. 5 ಸುಮಾರು ಐದು ಗಂಟೆಗಳ ಕಾಲ ರಾತ್ರಿಯಿಡೀ ಕಾಡುಪ್ರದೇಶದಲ್ಲಿ ಕಳೆಯುವಂತಾಯಿತು. ಮೇ 31ರಂದು ವೇಣೂರಿನಿಂದ ಹೊರಟಿದ್ದೇವು ಎಂದಿದ್ದಾರೆ.

Exit mobile version