Site icon Suddi Belthangady

ನಡ ಸ.ಪ್ರೌಢ ಶಾಲೆಯ ಗಣಿತ ಪ್ರಯೋಗಾಲಯಕ್ಕೆ ಕೆನರಾ ಕಾಲೇಜಿನ ತಂಡ ಶೈಕ್ಷಣಿಕ ಭೇಟಿ

ನಡ: ಕೆನರಾ ಪದವಿ ಕಾಲೇಜು ಮಂಗಳೂರು ಇಲ್ಲಿನ ವಿಜ್ಞಾನ ಪದವಿಯ ವಿದ್ಯಾರ್ಥಿಗಳು ಗಣಿತ ವಿಭಾಗದ ಮುಖ್ಯಸ್ಥ ಕೀರ್ತಿ ಆಳ್ವಾ ಇವರ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ನಡ ಇದರ ಗಣಿತ ಪ್ರಯೋಗಾಲಯಕ್ಕೆ ಜೂ.3ರಂದು ಶೈಕ್ಷಣಿಕ ಭೇಟಿ ನೀಡಿದರು.

ಸರಕಾರಿ ಪ್ರೌಢಶಾಲೆ ನಡ ಗಣಿತ ಪ್ರಯೋಗಾಲಯ ನಿರ್ಮಾಣ ಮಾಡಿ ರಾಷ್ಟ್ರಮಟ್ಟದ ಗಮನವನ್ನು ಈಗಾಗಲೇ ತನ್ನತ್ತ ಸೆಳೆದಿರುತ್ತದೆ. ಸುಮಾರು 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯದ ನಾನಾ ಜಿಲ್ಲೆಗಳಿಂದ ಭೇಟಿ ನೀಡಿರುವ ಈ ಶಾಲೆಗೆ ಹೊರ ರಾಜ್ಯಗಳ ಅಧ್ಯಯನ ತಂಡಗಳೂ ಆಗಮಿಸಿವೆ. ತಂಡದೊಂದಿಗೆ ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಪೂರ್ಣಿಮಾ ಆಗಮಿಸಿದ್ದರು.ಸರಕಾರಿ ಪದವಿ ಕಾಲೇಜು ಕಾರ್ ಸ್ಟ್ರೀಟ್ , ಮಂಗಳೂರಿನ ಉಪನ್ಯಾಸಕ ಮಹೇಶ್ ತಮ್ಮ ಕಾಲೇಜಿನ ಆಯ್ದ ವಿದ್ಯಾರ್ಥಿಗಳೊಂದಿಗೆ ಜೊತೆಗಿದ್ದರು.

ಗಣಿತ ಪ್ರಯೋಗಾಲಯ ವೀಕ್ಷಿಸಿ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ ತಂಡಕ್ಕೆ ಸಮಾಜ ವಿಜ್ಞಾನ ಶಿಕ್ಷಕ ಶಿವಪುತ್ರ ಸುಣಗಾರ ಸ್ವಾಗತಿಸಿದರು.

ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರು ಹಾಗೂ ಶಾಲಾ ವಿದ್ಯಾರ್ಥಿಗಳು ಕೆಲವು ಪ್ರಾತ್ಯಕ್ಷಿಕೆಗಳ ಮೂಲಕ ಗಣಿತದ ಪರಿಕಲ್ಪನೆಗಳನ್ನು ವಿವರಿಸಿದರು.

Exit mobile version