Site icon Suddi Belthangady

ಸುಲ್ಕೇರಿಮೊಗ್ರು ಸ.ಹಿ.ಪ್ರಾ.ಶಾಲಾ ನೂತನ ಪದಾಧಿಕಾರಿಗಳು ಮತ್ತು ಮಕ್ಕಳ ಮಂತ್ರಿಮಂಡಲ ರಚನೆ

ಸುಲ್ಕೇರಿಮೊಗ್ರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರು ಇಲ್ಲಿಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಧ್ಯಕ್ಷರಾಗಿ ರೇವತಿ ಪ್ರವೀಣ, ಉಪಾಧ್ಯಕ್ಷರಾಗಿ ನಳಿನಿ ಕೊಲ್ಲಂಗೆ, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾದರು. ಇದೇ ವೇಳೆ ನೂತನವಾಗಿ ಮಕ್ಕಳ ಮಂತ್ರಿ ಮಂಡಲ ರಚನೆ ಮಾಡಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿ ವಿದ್ಯಾಥಿಯಾದ ಧನುಷ್ ರವರು ಹಾಗೂ ಉಪಮುಖ್ಯಮಂತ್ರಿಯಾಗಿ ಸುಜನ್ ರವರು ಮಕ್ಕಳ ಮತದಾನದ ಮೂಲಕ ಅಯ್ಕೆಗೊಂಡರು.

ಶಾಲೆಯಲ್ಲಿನ ವಿವಿಧ ಸಂಘಗಳನ್ನು ರಚನೆ ಮಾಡಲಾಯಿತು.

Exit mobile version