Site icon Suddi Belthangady

ಬೆಂಗಳೂರು ಅಂತರಾಷ್ಟ್ರೀಯ ಯೋಗ ಉತ್ಸವ- 2023: ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಧರ್ಮಸ್ಥಳದ ದಿಶಾರಾಘ ಶೆಟ್ಟಿ

ಬೆಂಗಳೂರು: ಬೆಂಗಳೂರಿನ ಅವಿನಾಶ್ ಯೋಗ & ಏರೋಬಿಕ್ಸ್ ಇನ್ಸ್ಟಿಟ್ಯೂಟ್ ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್ & ಜಮುನ ರವಿ ಫೌಂಡೇಶನ್ ಇದರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮೊದಲನೇ ಅಂತರಾಷ್ಟ್ರೀಯ ಯೋಗ ಉತ್ಸವ- 2023 ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಧರ್ಮಸ್ಥಳದ ಶ್ರೀಮತಿ ದಿಶಾರಾಘ ಶೆಟ್ಟಿಯವರು ಮೂರನೇ ಸ್ಥಾನ ಪಡೆದು ಕೇಂಬೋಡಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರು ಮನಃಶಾಸ್ತ್ರಜ್ಞೆಯಾಗಿದ್ದು ಮಂಗಳೂರಿನ ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುತ್ತಾರೆ. ಧರ್ಮಸ್ಥಳದ ಶ್ರೀ ದಿನೇಶ್ ಶೆಟ್ಟಿ ಹಾಗೂ ಶ್ರೀಮತಿ ಸಾರಿಕಾ ಶೆಟ್ಟಿಯವರ ಪುತ್ರಿಯಾದ ಇವರು ಮಾಣಿಯ ಶ್ರೀ ವಿನೀತ್ ಶೆಟ್ಟಿಯವರ ಪತ್ನಿ.

Exit mobile version