Site icon Suddi Belthangady

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ‌ ಶಾಲೆ ಮೈರೋಳ್ತಡ್ಕ ಶಾಲಾ ಪ್ರಾರಂಭೋತ್ಸವ

ಮೈರೋಳ್ತಡ್ಕ: ಬಂದಾರು ಗ್ರಾಮದ‌ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ 2023-24 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಮೇ 31 ಆಚರಿಸಲಾಯಿತು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ದೀಪ ಬೆಳಗಿಸಿ ಈ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಬಂದಾರು ಗ್ರಾ.ಪಂ ಸದಸ್ಯರಾದ ಶ್ರೀಮತಿ ‌ಸುಚಿತ್ರಾ ಮುರ್ತಾಜೆ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಹರೀಣಾಕ್ಷಿ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಕೆ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಶಿಕ್ಷಕರಾದ ಶ್ರೀಧರ್ ವಂದಿಸಿದರು,ಹಾಗೂ ಶಿಕ್ಷಕ ಮಾಧವ ಗೌಡ ಕಾರ್ಯಕ್ರಮ‌‌ ನಿರೂಪಿಸಿದರು.
ಎಸ್.ಡಿ.ಎಂ.ಸಿ ಸದಸ್ಯರು ,ಪೋಷಕರು,ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಪುಷ್ಪಗುಚ್ಚ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.ಬರವಣಿಗೆ ಪುಸ್ತಕ,ಓದುವ ಪುಸ್ತಕ‌ ಹಾಗೂ ಸಮವಸ್ತ್ರ ವಿತರಿಸಲಾಯಿತು. ಪಾಯಸದ ಊಟ ನೀಡಿ ಮಕ್ಕಳಿಗೆ‌ ಮೊದಲ‌ ದಿನದ ಶಾಲೆ ಸವಿ ಸವಿಯಾಗಿರುವಂತೆ ಕಾರ್ಯಕ್ರಮ‌ ಆಯೋಜಿಸಲಾಗಿತ್ತು.ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಆಕರ್ಷಣಿಯವಾಗಿತ್ತು.

Exit mobile version