Site icon Suddi Belthangady

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ:ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಶಾಲಾ ನೂತನ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಓಸ್ವಲ್ಡ್ ಡಿಮೆಲ್ಲೋ ರವರನ್ನು ಸ್ವಾಗತಿಸುವುದರೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮೇ 31 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಾಲ್ಟರ್ ಮೋನಿಸ್, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಬೊನವೆಂಚರ್ ಪಿಂಟೋ ಹಾಗೂ ಜೊತೆ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ರೇಗೊ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಶಾಲಾ ಸಂಚಾಲಕರನ್ನು ಹಾಗೂ ಶಾಲೆಗೆ ನೇಮಕಗೊಂಡ ಹೊಸ ಶಿಕ್ಷಕಿಯರನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಶಿಸ್ತು ಹಾಗೂ ಪರಿಶ್ರಮದಿಂದ ಕಲಿತು, ವಿದ್ಯೆಯ ಜೊತೆಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಶಾಲಾ ಸಂಚಾಲಕರಾದ ವಂ.ಫಾ ವಾಲ್ಟರ್ ಡಿಮೆಲ್ಲೋರವರು ನುಡಿದು ಆಶೀರ್ವದಿಸಿದರು. ಶಿಕ್ಷಕ ವೃಂದದವರು ನೂತನ ಶೈಕ್ಷಣಿಕ ವರ್ಷಕ್ಕೆ ಪ್ರಾರ್ಥಿಸಿ, ಶುಭಾಶಯ ಗೀತೆಗಳನ್ನು ಹಾಡಿ, ಅಭಿನಯಗೀತೆಗಳಿಂದ ಎಲ್ಲರ ಮನರಂಜಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಎಲ್ವಿಟಾ ಪಾಯ್ಸ್ ಸ್ವಾಗತಿಸಿ, ಶ್ರೀಮತಿ ಸರಿತಾ ರೊಡ್ರಿಗಸ್ ವಂದಿಸಿದರು. ಶ್ರೀಮತಿ ಪ್ರೀತಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

Exit mobile version