Site icon Suddi Belthangady

ಲಾಯಿಲ ಪಡ್ಲಾಡಿ ಶಾಲೆಯಲ್ಲಿ ಪ್ರಾರಂಭೋತ್ಸವ

ಲಾಯಿಲ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಾಯಿಲ ಪಡ್ಲಾಡಿಯಲ್ಲಿ ಮೇ 31 ರಂದು ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಜರುಗಿತು.

ಶಾಲಾ ಮಕ್ಕಳನ್ನು ಹೂಗುಚ್ಛ ಮತ್ತು ಸಿಹಿ ತಿಂಡಿ ಕೊಟ್ಟು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಸಾಲ್ದಾನ ಸ್ವಾಗತಿಸಿದರು. ಬಳಿಕ ಉಚಿತ ಪಠ್ಯಪುಸ್ತಕ,ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿಯವರು ಮಕ್ಕಳಿಗೆ ಶುಭ ಕೋರಿದರು.

ಶಾಲಾ ನಾಮನಿರ್ದೇಶಕ ಪ್ರಸಾದ್ ಏನಿಂಜೆ ಕಲಿಕಾ ಪ್ರಗತಿ ಹಾಗೂ ಊರ ಶಾಲೆಯ ಬಗ್ಗೆ ಮಾತನಾಡಿದರು. ಉರಿನ ಗಣ್ಯರಾದ ಅಚ್ಚುತ ಗೌಡ, ಆನಂದ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಪ್ಪ ಶುಭ ಕೋರಿದರು. ಊರ ವಿದ್ಯಾ ಅಭಿಮಾನಿಗಳು ಪೋಷಕರು, ಮಕ್ಕಳ ಜೊತೆ ಭಾಗವಹಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಸಹಕರಿಸಿದರು.

Exit mobile version