Site icon Suddi Belthangady

ಮರೋಡಿ: ಗ್ರಾಂ.ಪಂ.ನಲ್ಲಿ FTK ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ – 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮ ಪಂಚಾಯತ್ ನಲ್ಲಿ FTK ತರಬೇತಿಯನ್ನು ಮೇ 30 ರಂದು ಆಯೊಜಿಸಲಾಗಿತ್ತು.

ಈ ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪದ್ಮಶ್ರೀ ಜೈನ್,ಉಪಾಧ್ಯಕ್ಷರು ಯಶೋಧರ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ಕೆ.ಜಿ, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ನೀರು ಘಂಟಿ ಗಳು‌ ಹಾಗು ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬೆಳ್ತಂಗಡಿ ತಾಲೂಕಿನ ಸಮುದಾಯ ಸಂಘಟಕರಾದ ವಿಶಾಲಾಕ್ಷಿ ರವರು ನೀರಿನ ಗುಣಮಟ್ಟವನ್ನು FTK kit ನ ಮೂಲಕ ಪರೀಕ್ಷೆಯನ್ನು ಪ್ರಾತ್ಯಾಕ್ಷಿಕವಾಗಿ ಮಾಡಿ ತೋರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸದ ಬಗ್ಗೆ ಚರ್ಚೆ ಮಾಡಿ ನೀರಿನ ಸಮಸ್ಯೆಯಿರುವ ಜನರಿಗೆ ನೀರು ನೀಡುವುದೆಂದು ನಿರ್ಧರಿಸಲಾಯಿತು, ಸಮುದಾಯ ವಂತಿಗೆಯ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ಜಲಜೀವನ್ ಮಿಷನ್ ಸಮುದಾಯ ಸಂಘಟಕರಾದ ಶ್ರೀಮತಿ ವಿಶಾಲಾಕ್ಷಿ ಆಯೋಜಿಸಿ ಯಶಸ್ವಿಗೊಳಿಸಿದರು.

Exit mobile version