Site icon Suddi Belthangady

ಕುಕ್ಕೇಡಿ:ನೀರಿನ ಗುಣಮಟ್ಟ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಾಗಾರ

ಕುಕ್ಕೇಡಿ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮಪಂಚಾಯಿತಿಯಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಬಗ್ಗೆ ತರಬೇತಿಯನ್ನು ಕುಕ್ಕೇಡಿ ಮತ್ತು ನಿಟ್ಟದೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ದಿನಾಂಕ ಮೇ 30 ರಂದು ಆಯೋಜಿಸಲಾಯಾಗಿತ್ತು.

ಈ ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀರುಗಂಟಿಯವರು ಸೇರಿ ಒಟ್ಟು 13 ಮಂದಿ ಭಾಗವಹಿಸಿದರು.

ಈ ತರಬೇತಿಯಲ್ಲಿ ಜಲಜೀವನ್ ಮಿಷನ್ ದ್ಯೇಯೋದ್ದೇಶ, ಸಮುದಾಯ ಭಾಗವಹಿಸುವಿಕೆಯ ಮಹತ್ವ, ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆ ಮಾಡುವ ಮಹತ್ವ, ಪರೀಕ್ಷೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಸದಸ್ಯರಿಂದಲೇ ಮಾಡಿಸಿ ತೋರಿಸಲಾಯಿತು. ಈ ತರಬೇತಿಯನ್ನು ಗ್ರಾಮ್ಸ್ ಸಂಸ್ಥೆಯ ಸಿಬ್ಬಂದಿ ಪುಷ್ಪಲತಾರವರು ತರಬೇತಿಯನ್ನು ನೀಡಿ ಯಶಸ್ವಿಗೊಳಿಸಿದರು.

Exit mobile version