Site icon Suddi Belthangady

ಕೇಂದ್ರದ ಬಿಜೆಪಿ ಸರಕಾರ 9 ವರ್ಷ ಪೂರೈಸಿ ವಿಶ್ವದಲ್ಲಿ ಹೆಸರು ಪಡೆದಿದೆ- ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷ ಪೂರೈಸಿ ವಿಶ್ವದಲ್ಲಿಯೇ ಬಲಿಷ್ಟ ಸ್ಥಾನಮಾನ ಪಡೆದುಕೊಂದಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಮೇ.30 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೋದಿಯವರ ಕೇಂದ್ರ ಸರಕಾರ ಆರ್ಥಿಕವಾಗಿ ಬಲಿಷ್ಠವಾಗಿ ಮೂಲಭೂತ ಸೌಕರ್ಯದಲ್ಲಿ ಅಚ್ಚರಿಯ ಪ್ರಗತಿಯಾಗಿದೆ. ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಕಂಡಿದೆ.ಆದರೆ ವಿರೋಧ ಪಕ್ಷ ಕಾಂಗ್ರೆಸ್ ಹತಾಶರಾಗಿ ರಾಜಕೀಯ ಮಾಡುತ್ತಿದೆ.ನೂತನ ಸಂಸದ್ ಭವನ ಉದ್ಘಾಟನೆಯಲ್ಲಿ ತನ್ನ ಸಣ್ಣತನ ಪ್ರದರ್ಶನ ಮಾಡಿದೆ.ಕಾಂಗ್ರೆಸ್ ನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 35 ಸಾವಿರ ಚದರ ಅಡಿಯ ಅಂದಾಜು 3ಸಾವಿರ ಕೋಟಿಗೆ ಈಗ 4 ಸಾವಿರ ಕೋಟಿಗೆ ಯೋಜನೆ ಮಾಡಲಾಗಿತ್ತು. ಪ್ರಸ್ತುತ ರೂ 970 ಕೋಟಿ ವೆಚ್ಚದಲ್ಲಿ 65 ಸಾವಿರ ಚದರ ಅಡಿಯ ಸುಂದರ ಸಂಸದ್ ಭವನ ನಿರ್ಮಾಣಗೊಂಡು ಉದ್ಘಾಟನೆಯಾಗಿದೆ.ಸತ್ಯ ನ್ಯಾಯ ಸಮಾನತೆಯ ರಾಜ ಧರ್ಮದ ಸಮಾನದ ರಾಜ ದಂಡವನ್ನು ಯಾವುದೋ ಒಂದು ವಸ್ತು ಸಂಗ್ರಹದ ವಸ್ತು ಎಂದು ಕಾಂಗ್ರೇಸ್ ರಾಜಕೀಯದಿಂದ ಹೇಳುತ್ತಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಸ್ವಾಗತಿಸುತ್ತದೆ. ಸಮರ್ಥ ಪ್ರತಿ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ. ಕಾಂಗ್ರೇಸ್ ದ್ವೇಷ ರಾಜಕೀಯ ಬಿಟ್ಟು, ಅಭಿವೃದ್ಧಿ ಕಡೆ ಗಮನ ನೀಡಲಿ.20 ಸಾವಿರ ಕೋಟಿಯ ಕಾಮಗಾರಿ ಯೋಜನೆ ಸ್ಥಗಿತಕ್ಕೆ ಮುಂದಾಗಿ ಆಡಳಿತ ಮಂಜೂರಾದ ಕಾಮಗಾರಿ 40 ಶೇಕಡ ಕಡಿತ ಮಾಡಲು ಹೊರಟಿದೆ.ದ್ವೇಷ ರಾಜಕೀಯದಂತೆ ಬಿಜೆಪಿ ಕಾರ್ಯಕರ್ತರ ಮತ್ತು ಶಾಸಕರ ಮೇಲೆ ಎಫ್ ಐ ಆರ್ ದಾಖಲೆ ಮಾಡಲು ಹೊರಟಿದೆ.ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನ ತರಲು ಸಾಧ್ಯ ಎಂಬುದಕ್ಕೆ ಜನರು ಕಾಯುತ್ತಿದ್ದಾರೆ.ಈ ಗ್ಯಾರಂಟಿ ಭರವಸೆಯಿಂದ ಆಡಳಿತಕ್ಕೆ ಬಂದಿರುವುದು ಜವಾಬ್ದಾರಿ ಅವರಲ್ಲಿ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಧರ್ಮಸ್ಥಳ, ಗಣೇಶ್ ಗೌಡ ನಾವೂರು, ಕಾರ್ಯಾಲಯ ಕಾರ್ಯದರ್ಶಿ ನಂದ ಕುಮಾರ್ ಉಪಸ್ಥಿತರಿದ್ದರು.

Exit mobile version