Site icon Suddi Belthangady

ಬಿಜೆಪಿ ಮತ್ತು ಬೆಳ್ತಂಗಡಿ ಶಾಸಕರಿಂದ ಬಿಲ್ಲವ ಸಮಾಜಕ್ಕೆ ಯಾವುದೇ ಅನ್ಯಾಯ ಆಗಿಲ್ಲ, ಬಿಜೆಪಿ ಸರಕಾರದಿಂದ ಅನೇಕ ಕೊಡುಗೆ ಸಿಕ್ಕಿರುತ್ತದೆ- ಬಿಲ್ಲವ ಸಮಾಜದವರಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಸತ್ಯಜೀತ್‌ ಸುರತ್ಕಲ್ ರವರು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಹರೀಶ್ ಪೂಂಜ ಹಾಗೂ ಭಾರತೀಯ ಜನತಾ ಪಾರ್ಟಿಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಮಾತನ್ನು ವ್ಯಕ್ತಪಡಿಸಿದ್ದರು. ಅದು ಶುದ್ಧ ಸುಳ್ಳು. ಬಿಲ್ಲವ ಸಮಾಜಕ್ಕೆ ಶಾಸಕ ಹರೀಶ್ ಪೂಂಜ, ಬಿಜೆಪಿ ಸರಕಾರ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಬಿಲ್ಲವ ಸಮಾಜದ ನಾಯಕರಾದ ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಮಂಜುನಾಥ ಸಾಲಿಯಾನ್ ಬಾರ್ಯ, ಮಾಜಿ ಸಂಘಟನಾ ಕಾರ್ಯದರ್ಶಿ ರವಿ ಕುಮಾರ್ ಬರೆಮೇಲು ಹೇಳಿದರು.ಅವರು ಮೇ.30 ರಂದು ಬೆಳ್ತಂಗಡಿ ಪಿನಾಕಿ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ಹಿಂದುತ್ವಕ್ಕಾಗಿ ತಾವೂ ನಮ್ಮ ಬದುಕನ್ನು ಮೀಸಲಿರಿಸಿದ ಬಗ್ಗೆ ನಮಗೆ ಅತ್ಯಂತ ಗೌರವ ಇದೆ. ರಾಜಕೀಯ ಕ್ಷೇತ್ರದಲ್ಲೂ ನಿಮ್ಮಿಂದ ಸೇವೆ ದೊರಕಬೇಕಿತ್ತು ಎಂದು ಆಶಯ ಹೊಂದಿದ್ದ ನಾವು, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜರವರಿಗೆ ಪಕ್ಷದಿಂದ ಅವಕಾಶ ಸಿಕ್ಕಿದೆಯೇ ಹೊರತು ಯಾರನ್ನು ತೇಜೋವಧೆ ಮಾಡಿ ಅವರು ರಾಜಕೀಯಕ್ಕೆ ಬಂದವರಲ್ಲ. ಇಡೀ ರಾಜ್ಯದಲ್ಲಿ ಇದ್ದರೆ ಹರೀಶ್‌ ಪೂಂಜರಂತ ಶಾಸಕರು ಬೇಕು ಎಂದು ಅಭಿಪ್ರಾಯ ಇರುವ ಮಟ್ಟಿಗೆ ಜನ ಸ್ಪರ್ಶಿಯಾಗಿ ನಿರ್ವಹಿಸಿದವರು.
ವೈಯಕ್ತಿಕವಾಗಿ ಸತ್ಯಜಿತ್ ಸುರತ್ಕಲ್ ಎಂದು ಜನರು ಗುರುತಿಸಿದ್ದರೆ ಅದು ಹಿಂದೂ ಸಂಘಟನೆಗಳಿಂದ. ಹಿಂದೂ ಸಂಘಟನೆಗಳು ನೀವು ಮತ್ತು ನಾನು ಪ್ರಾರಂಭ ಮಾಡಿದ್ದಲ್ಲ, ಸಂಘಟನೆಯನ್ನು ಸಂಘದ ಹಿರಿಯರು ಪ್ರಾರಂಭ ಮಾಡಿದ್ದು.ಹಾಗಾಗಿ ಇದು ಯಾರಿಗೂ ನನ್ನಿಂದಾಗಿ ಸಂಘಟನೆ ಹೇಳುವಂತಹ ಅಧಿಕಾರ ನಿಮಗೂ ಇಲ್ಲ, ನನಗೂ ಇಲ್ಲ ನನ್ನಿಂದಾಗಿ ಸಂಘಟನೆ ಇರುವುದು.
ನೀವು 5 ವರ್ಷದ ಹಿಂದೆ ಸಂಘಟನೆಯಿಂದ ವಿಮುಖರಾದ ಮೇಲು ಸಂಘಟನೆ ಕುಂಟಿತವಾಗಿಲ್ಲ ಮತ್ತು ಬಲಿಷ್ಟವಾಗಿದೆ.

ನಿಮ್ಮ ವೈಯಕ್ತಿಕ ತೆವಲಿಗೆ ನೀವು ಬೆಳ್ತಂಗಡಿಗೆ ಬಂದು ಭಾರತೀಯ ಜನತಾ ಪಾರ್ಟಿ ವಿರುದ್ಧ ಒಗ್ಗಟ್ಟಿನಲ್ಲಿರುವ ಬಿಲ್ಲವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದೀರಿ. ಹಿಂದೂ ಸಂಘಟನೆಯಲ್ಲಿ ತಾವೂ ದುಡಿಯುತ್ತಿರುವಾಗ ಗಳಿಸಿದಂತಹ ಹೆಸರನ್ನು ಬರುವಂತದು ಎಷ್ಟು ಸರಿ, ಒಂದು ಸಮುದಾಯ ಓಲೈಕೆಗೆ ಬರುವುದು ಎಷ್ಟು ಸರಿ. ಹರೀಶ್ ಪೂಂಜ ಹಿಂದುತ್ವವಾದಿ ನಿಮ್ಮ ಹಾಗೆ ಅವಕಾಶವಾದಿ ಅಲ್ಲ. ಈಗ ಬಿಲ್ಲವ ಸಮಾಜದ ಮುಖಂಡನೆಂದು ಹೇಳಿಕೊಂಡು ಸ್ವಯಂ ಘೋಷಿತ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಎಂದು ಹೇಳಿಕೊಂಡು ತಿರುಗುತ್ತಿದ್ದೀರಿ. ಇದರ ಇತರ ಪದಾಧಿಕಾರಿಗಳು ಯಾರು, ಕಚೇರಿ ಎಲ್ಲಿದೆ? ಹಿಂದುತ್ವದ ಹೆಸರು ಹೇಳಿಕೊಂಡು ಹಿಂದೂ ವಿರೋಧಿ ಕಾಂಗ್ರೆಸ್ ಗೆ ಮನಸ್ಥಿತಿ ಹೇಗೆ ಬಂತು ನಿಮಗೆ. ಬಪ್ಪನಾಡು ದೇವಸ್ಥಾನದ ಹತ್ತಿರ ಮನೆ ನಿರ್ಮಾಣದ ಗುತ್ತಿಗೆದಾರ ಬಿಲ್ಲವ ಸಮಾಜದ ಪ್ರತೀಶ್ ಪೂಜಾರಿಯವರಿಗೆ ರೂ.28 ಲಕ್ಷ ಪಾವತಿಸಲು ಬಾಕಿ ಇರುವಾಗ ನೀವು ಮಧ್ಯ ಪ್ರವೇಶಿಸಿ ರೂ 8 ಲಕ್ಷ ಮಾತ್ರ ಅವರಿಗೆ ನೀಡಿ 20 ಲಕ್ಷವನ್ನು ತಾವು ಇರಿಸಿಕೊಂಡು ವಂಚಿಸಿದ್ದು ಯಾವ ಹಿಂದುತ್ವ ಅಥವಾ ಜಾತಿವಾದ.
ಹರೀಶ್ ಪೂಂಜ ಶಾಸಕರಾಗುವ ಮೊದಲೇ ಶಿಶಿಲ ಒಟ್ಲಗರಡಿ ಬ್ರಹ್ಮಕಲಶೋತ್ಸವವನ್ನು ತಾಲೂಕಿನ 81 ಗ್ರಾಮದಿಂದಲೂ ಹೊರೆಕಾಣಿಕೆ ಸಮರ್ಪಣೆ, ಕಂಕನಾಡಿಯಿಂದ ಓಟ್ಲ ಗರಡಿಗೆ ವೀರ ಪುರುಷ ಕೋಟಿ ಚೆನ್ನಯ್ಯರ ಮೂರ್ತಿಯ ಶೋಭಾ ಯಾತ್ರೆ, ಅಲ್ಲದೆ ರೂ 6 ಲಕ್ಷ ಅನುದಾನ, ಶಿಬಾಜೆ ಗ್ರಾಮದ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ 5 ಕೋಟಿ ಅನುದಾನ ಒದಗಿಸಿದ್ದಾರೆ. ತಾಲೂಕಿನ ಹಲವಾರು ಗರಡಿಗಳಿಗೆ ಅನುದಾನ, ಬಳಂಜ ಶ್ರೀ ಗುರುನಾರಾಯಣ ಸಂಘಕ್ಕೆ 40 ಲಕ್ಷ ಅನುದಾನ, ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಸರಕಾರದಿಂದ 2.5 ಕೋಟಿ ಅನುದಾನ, ಕೇಂದ್ರ ಸರಕಾರದಿಂದ ಶಿವಗಿರಿಗೆ 70 ಕೋಟಿ ಅನುದಾನ.
ಮೊದಲಾದ ಅನುದಾನ ಒದಗಿಸಿದ್ದು ಬಿಲ್ಲವ ಸಮಾಜಕ್ಕೆ ಹರೀಶ್ ಪೂಂಜ, ಬಿಜೆಪಿ ಸರಕಾರ.ಏನು ಅನ್ಯಾಯ ಮಾಡಿದೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮರೋಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಬುಣ್ಣನ್, ಬೆಳ್ತಂಗಡಿ ಸಂಘದ ನಿರ್ದೇಶಕ ಗಂಗಾಧರ್ ಪರಾರಿ, ಮಾಜಿ ನಿರ್ದೇಶಕ ರಾಜೇಶ್ ಪೂಜಾರಿ ಮೂಡುಕೋಡಿ, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ತಣ್ಣೀರುಪಂತ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಜೇಂಕ್ಯಾರ್, ಕಿರಣ್ ಮಂಜಿಲಾ, ಅಶೋಕ್ ಪೂಜಾರಿ ಕಡಿರುದ್ಯಾವರ ಉಪಸ್ಥಿತರಿದ್ದರು.

Exit mobile version