Site icon Suddi Belthangady

ಹರೀಶ್ ಪೂಂಜ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಆರೋಪ: ಸುದ್ದಿಗೋಷ್ಠಿಯಲ್ಲಿ ಶಶಿರಾಜ್ ಶೆಟ್ಟಿ ಪ್ರತ್ಯುತ್ತರ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ವಿರುದ್ದ ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳ‌ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಬೆಳ್ತಂಗಡಿ ಬಂಟರ ಭವನದಲ್ಲಿ ಶಶಿರಾಜ್ ಶೆಟ್ಟಿ‌ ಗುರುವಾಯನಕೆರೆ ಮೆ.29 ರಂದು ಸುದ್ದಿಗೊಷ್ಠಿ‌ ನಡೆಸಿದರು.

ಬೆಳ್ತಂಗಡಿ ಹಿಂದುತ್ವ ಕೇವಲ ಮಹೇಶ್ ಶೆಟ್ಟಿ ಅವರಿಂದ ಆದದ್ದಲ್ಲ. ಇವರು ಉಜಿರೆಗೆ ಬರುವ ಮುಂಚೆಯೇ ತಾಲೂಕಿನಲ್ಲಿ ಹಿಂದುತ್ವ ಹಿರಿಯ ನಾಯಕರಿದ್ದರು.ಪಕ್ಷಕ್ಕಾಗಿ ದುಡಿದಿದ್ದಾರೆ.ಹರೀಶ್ ಪೂಂಜರ ಬಗ್ಗೆ ತೇಜೋವಧೆ ಮಾಡುವ ಕೆಲಸಗಳು ನಡೆಯುತ್ತಿದೆ.ಇದರಿಂದಾಗಿ ಸಮಾಜಕ್ಕೆ ಕೆಟ್ಟ ಸಂದೇಶಗಳು ರವಾನೆಯಾಗುತ್ತಿದೆ.
ಮಹೇಶ್ ಶೆಟ್ಟಿ 20% ಹಿಂದುತ್ವ 70 % ರೌಡಿಸಂ ಮಾಡುತ್ತಾ ಬರುತ್ತಿದ್ದಾರೆ. ಅವರು ಮಾಡಿದ ಆರೋಪ ಆಧಾರ ರಹಿತ ಆರೋಪವಾಗಿದೆ ಎಂದು ಹೇಳಿದರು. ಮಹೇಶ್ ಶೆಟ್ಟಿ ತಿಮರೋಡಿ ನಂಜುಕಾರುವ ಮನುಷ್ಯ.ಇವರನ್ನು ನಾಯಕರನ್ನಾಗಿ ಮಾಡಿದವರಿಗೂ ಅನ್ಯಾಯ ಮಾಡಿದ್ದಾರೆ ಎಂದರು.
ಇನ್ನೂ ಹರೀಶ್ ಪೂಂಜ ಎಬಿವಿಪಿ ಯಲ್ಲಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದಾರೆ.ಆದರೆ ಮಹೇಶ್ ಶೆಟ್ಟಿ‌‌ ಕೇವಲ ತಾಲೂಕಿಗೆ‌ ಮಾತ್ರ. ಇವರಿಗೆ ತಾಕತ್ತಿದ್ದರೆ ಹರೀಶ್ ಪೂಂಜರ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ‌ ಎಂದು ವಾಗ್ದಾಳಿ‌ ನಡೆಸಿದರು.ಇನ್ನೂ ಅನೇಕ ವರ್ಷಗಳಿಂದ‌ ಮಹೇಶ್ ಶೆಟ್ಟಿ ಅವರ ಜೊತೆಗೆ ಇದ್ದ ಶಂಕರ್ ಶೆಟ್ಟಿ ಮಾತನಾಡಿ ಮಹೇಶ್ ಶೆಟ್ಟಿ ಅವರ ಎಲ್ಲಾ‌ ವಿಚಾರಗಳು ನನಗೆ ಗೊತ್ತು.ತಿಮರೋಡಿಗೆ ಮಹೇಶ್ ಶೆಟ್ಟಿ ಬರುವ ಮೊದಲೇ ನಾನು ಅಲ್ಲಿ ಇದ್ದವ. ಅಲ್ಲಿನ ದೈವ ದೇವರುಗಳಿಗೆ ದೀಪವನ್ನು ನಾನು ಇಡುತಿದ್ದೆನು.ಅನೇಕ ಜಾಗಗಳ ವಿಚಾರದಲ್ಲಿ ಶಾಮಿಲಾಗಿದ್ದಾರೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಸದಾಶಿವ ಶೆಟ್ಟಿ, ಗೋಪಾಲ್ ಪೂಜಾರಿ ಗರ್ಡಾಡಿ, ರಂಜಿತ್ ಶೆಟ್ಟಿ, ಯತೀಶ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version