Site icon Suddi Belthangady

ಡಿ.ಕೆ.ಆರ್.ಡಿ.ಎಸ್ ಮಕ್ಕಳ ರಜಾ ಶಿಬಿರ- ಚಿಲಿಪಿಲಿ 2023 ಹಾಗೂ ಮಾಸಿಕ ಬೆಂಬಲ ಸಭೆ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ನೇತೃತ್ವದಲ್ಲಿ ಹೆಚ್. ಐ.ವಿ. ಸೋಂಕಿತ ಹಾಗೂ ಬಾಧಿತ ಮಕ್ಕಳ ರಜಾ ಶಿಬಿರ ಮಾಸಿಕ ಬೆಂಬಲ ಸಭೆಯು ಮೇ ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೇಟ್ ನಿರ್ದೇಶಕ ವಂದನೀಯ ಫಾ. ತೋಮಸ್ ಪುಲ್ಲಾಟ್ ರವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು.

ನವಚೈತನ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗಂಡಿಬಾಗಿಲು ಸಂತ ತೋಮಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಜೋಸ್ ಆಯಾಂಕುಡಿ, ಸಿಸ್ಟರ್ ಡೀನಾ ಎಸ್. ಎ .ಬಿ .ಎಸ್, ಸಂಡೇ ಸ್ಕೂಲ್ ಅಧ್ಯಾಪಕರು, ಮಿಷನ್ ಲೀಗ್ ಪದಾಧಿಕಾರಿಗಳು ಅತಿಥಿಗಳಾಗಿ ಆಗಮಿಸಿ ಆಹಾರ ಕಿಟ್ ಹಾಗೂ ಧನ ಸಹಾಯ ಹಸ್ತಾಂತರಿಸಿದರು.

ಬೆಳ್ತಂಗಡಿ ತಾಲೂಕಿನ ಸಹಾಯ ಹಸ್ತ ತಂಡದ ಪದಾಧಿಕಾರಿಗಳಾದ ಸುನಿಲ್ ಮೊರಾಸ್, ಶ್ರೀಮತಿ ಡೈನಾ ಮಾರ್ಟಿಸ್ ಹಾಗೂ ಕು. ಶೈನಿ ಡಿ’ಸೋಜಾ ಅತಿಥಿಗಳಾಗಿ ಆಗಮಿಸಿ ಪುಸ್ತಕ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ ಧನ ಸಹಾಯ ವಿತರಿಸಿದರು.

ಈ ಸಂದರ್ಭದಲ್ಲಿ ನವಜೀವನ ಇಸ್ರೇಲ್ ವತಿಯಿಂದ ಹೆಚ್.ಐ.ವಿ./ ಏಡ್ಸ್ ಕಾರ್ಯಕ್ರಮಕ್ಕಾಗಿ ಧನ ಸಹಾಯದ ಚೆಕ್ಕನ್ನು ಹಸ್ತಾಂತರಿಸಲಾಯಿತು. ರುಡ್ ಸೆಟ್ ಸಂಸ್ಥೆಯ ತರಬೇತುದಾರ ಜೇಮ್ಸ್ ಅಬ್ರಹಾಂ ಹಾಗೂ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಮೇರಿ ಎಂ.ಜೆ. ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಮಾಹಿತಿ ಕಾರ್ಯಗಾರ ನಡೆಸಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಾಯಿಲ ಜ್ಯೋತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿ. ಅನೂಜರವರು ಆರೋಗ್ಯ ತಪಾಸಣೆ ನಡೆಸಿದರು. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಸ್ವಾಗತಿಸಿ, ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ ಸೋಜ ಹಾಗೂ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕರ್ತ ಜೋನ್ಸನ್ ಧನ್ಯವಾದವಿತ್ತರು.

ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗ, ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಎಸ್.ಡಿ.ಎಮ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿದ್ಯಾರ್ಥಿಗಳು ಹಾಗೂ ಕೇರಳದ ರಾಜಗಿರಿ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಹಲವಾರು ಮಂದಿ ಈ ಶಿಬಿರಕ್ಕೆ ಧನಸಹಾಯ ಮಾಡಿ ಶಿಬಿರದ ಯಶಸ್ಸಿಗೆ ಸಹಕರಿಸಿದ್ದಾರೆ.

Exit mobile version