Site icon Suddi Belthangady

ಮದ್ದಡ್ಕ ತಾಯಿ‌ ಪಿಲಿಚಾಮುಂಡಿ‌ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕ ತಾಯಿ‌ ಪಿಲಿಚಾಮುಂಡಿ‌ ದೈವಸ್ಥಾನವು ಶತಮಾನಗಿಂತಲೂ‌‌ ಹಿಂದಿನ ಪ್ರಸಿದ್ದವಾಗಿದ್ದು ಭಕ್ತರ ಕಷ್ಟಗಳನ್ನು ನಿವಾರಿಸಿ ಬದುಕಿಗೆ ಅಶ್ರಯ ತಾಣವಾಗಿದ್ದು, ಮತ್ತೊಮ್ಮೆ ದೈವಸ್ಥಾನ ಜೀರ್ಣೋದ್ದಾರ ಮಾಡುವ ಅಂಗವಾಗಿ ಗ್ರಾಮಸ್ತರ ಉಪಸ್ಥಿತಿಯಲ್ಲಿ ಪ್ರಶ್ನಾಚಿಂತಕ ಉಡುಪಿ ಗೋಪಾಲಕೃಷ್ಣರವರ‌ ನೇತ್ರತ್ವದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ಮೆ.27 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು‌.

ಈ ಸಂದರ್ಭದಲ್ಲಿ ದೈವಸ್ಥಾನದ ಅನುವಂಶಿಕ‌‌ ಅಡಳಿತ ಮೊಕ್ತೇಸರರು ಮೋಹನ್ ಕೆರ್ಮುಣ್ಣಾಯ ಮೈರಾರು, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮೂಡುಮನೆ, ರಘುರಾಮ ಭಟ್ ಅಸ್ರಣ್ಣರು ಮಠ ಮನೆ, ಮಾಜಿ ಶಾಸಕ ಕೆ‌ ವಸಂತ ಬಂಗೇರ, ಗೋಪಾಲ ಶೆಟ್ಟಿ ಕೋರ್ಯಾರು, ಬಾಬು ಶೆಟ್ಟಿ ಪಡ್ಡೈಲು, ಎಸ್.ಗಂಗಾಧರ ಭಟ್ ಕೆವುಡೇಲು, ವ್ರಷಭ ಆರಿಗ ಪರಾರಿ ಗುತ್ತು, ಹಾಗೂ ಸಂಬಂದಪಟ್ಟ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version