
ಉಜಿರೆ: ಮೇ.27 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷದ್ರುವ ಪಟ್ಲ ಸಂಭ್ರಮ-2023 ಪ್ರಯುಕ್ತ ಕುಂಬಳೆ ಸುಂದರ್ ರಾವ್ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ತಂಡ ನಿರ್ದೇಶಕ ಅರುಣಕುಮಾರ್ ಧರ್ಮಸ್ಥಳ ನಿರ್ದೇಶನದಲ್ಲಿ “ಕುಮಾರ ವಿಜಯ “ಪ್ರಸಂಗದ ಯಕ್ಷಗಾನ ಪ್ರದರ್ಶಿಸಿತು.
ಪ್ರದರ್ಶನದ ಕೊನೆಯಲ್ಲಿ ನಿರ್ದೇಶಕ ಅರುಣ ಕುಮಾರ್ ಧರ್ಮಸ್ಥಳ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಸಹಿತ ಕಲಾವಿದರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.