Site icon Suddi Belthangady

ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಪ್ರಶಸ್ತಿ

ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳೆಯರ ಫುಟ್‌ಬಾಲ್ ಪಂದ್ಯಾವಳಿಯು ಸಂತ ಅನ್ನಮ್ಮ ಪದವಿ ಕಾಲೇಜಿನ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ 8 ತಂಡಗಳು ಭಾಗವಹಿಸಿದ್ದು, ಸೇಕ್ರೇಡ್ ಹಾರ್ಟ್ ಪದವಿ ಕಾಲೇಜು, ಮಡಂತ್ಯಾರು ಪ್ರಥಮ ಬಹುಮಾನ ಪಡೆದರೆ, ಮೂಡಬಿದಿರೆಯ ಆಳ್ವಾಸ್ ಪದವಿ ಕಾಲೇಜು ದ್ವಿತೀಯ ಮತ್ತು ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಬಹುಮಾನ ಪಡೆದುಕೊಂಡಿತು. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಆಶ್ರಯದಲ್ಲಿ ನಡೆದ ಪಂದ್ಯಾವಳಿಯನ್ನು ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಮಖ್ಯಸ್ಥ ವಂ. ಐಸಾಕ್ ರತ್ಕಾಕರ್ ಉದ್ಘಾಟಿಸಿದರು. ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ತೃಪ್ತಿ ಬೋಪಣ್ಣ ಉಪಸ್ಥಿತರಿದ್ದರು. ಮಂಗಳೂರು ವಿ.ವಿ ಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ ಸೋಜಾ ವೀಕ್ಷಕರಾಗಿ ಆಗಮಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು.


ಸಮಾರೋಪದಲ್ಲಿ ವಿರಾಜಪೇಟೆ ಕಾಫಿ ಬೆಳೆಗಾರ ಬಿ.ಜೆ.ಬೋಪಣ್ಣ ಮತ್ತು ವಿರಾಜಪೇಟೆ ಆಕ್ಸ್‌ಫರ್ಡ್ ಫುಟ್ ಬಾಲ್ ಕ್ಲಬ್‌ನ ಅಧ್ಯಕ್ಷ ರ‍್ಯಾನ್ಸನ್ ಚಾಕೋ ಭಾಗವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ರಾಖಿ ಪೂವಣ್ಣ ಸ್ವಾಗತಿಸಿದರು.

Exit mobile version