
ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ಮೇ.16ರಂದು ಹಾಜಿ ಅಬ್ದುಲ್ ಲತೀಪ್ ಸಾಹೇಬರ ಅದ್ಯಕ್ಷತೆಯಲ್ಲಿ ನಡೆಯಿತು.ವೀಕ್ಷಕರಾಗಿ ಕೇಂದ್ರ ಸಮಿತಿಯ ಇಕ್ಬಾಲ್
ಹಾಗೂ ಅಬ್ದುಲ್ ಗಫೂರ್ ಆಗಮಿಸಿದ್ದರು.ಕಾರ್ಯದರ್ಶಿ ಅಬೂಬಕ್ಕರ್ ವರದಿ ವಾಚಿಸಿದರು.ಕೆ.ಎಸ್.ಅಬ್ದುಲ್ಲ ಲೆಕ್ಕ ಪತ್ರ ಮಂಡಿಸಿದರು.
ಹಾಜಿ ಅಬ್ದುಲ್ ಲತೀಪ್ ಸಾಹೇಬರನ್ನು ಸನ್ಮಾನಿಸಿ ಘಟಕದ ಗೌರವಾದ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಮುಂದಿನ 2023-25ರ ಅವದಿಗೆ ಅದ್ಯಕ್ಷರಾಗಿ ಬಿ.ಶೇಕುಂಙಿ ಅವಿರೋಧವಾಗಿ ಆಯ್ಕೆಯಾದರು.ಪ್ರದಾನ ಕಾರ್ಯದರ್ಶಿಯಾಗಿ ಆಲಿಯಬ್ಬ ಪುಲಾಬೆ, ಕೋಶಾದಿಕಾರಿಯಾಗಿ ಅಬ್ಬೋನು ಮದ್ದಡ್ಕ ಸಹಿತ ಒಟ್ಟು
22 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು.